ಸಕಲೇಶಪುರ: ಶನಿವಾರ ಬೆಳಗ್ಗೆ ಸಕಲೇಶಪುರದಿಂದ ಹಾಸನಕ್ಕೆ ಬರುತ್ತಿದ್ದ ಥಾರ್ ವಾಹನವು ಸಕಲೇಶಪುರದಲ್ಲಿ ಮಾರ್ಗ ಮಧ್ಯೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮರದ ದಿಮ್ಮಿಯೊಂದಕ್ಕೆ ಬಲವಾಗಿ ಗುದ್ದಿದ ರಭಸಕ್ಕೆ ಜೀಪ್ ನುಜ್ಜುಗುಜ್ಜಾಗಿದ್ದು ಅದರಲ್ಲಿದ್ದ ವ್ಯಕ್ತಿ ಸ್ಥಿತಿ ಗಂಭೀರವಾಗಿತ್ತು.
ಶನಿವಾರ ಬೆಳಗಿನ ಜಾವ 3.30 ರ ವೇಳೆ ಹಾಸನದ ಸುರಕ್ಷ ಮೆಡಿಕಲ್ ನ ಮಾಲೀಕರಾಗಿದ್ದ ಅನಿಲ್(27) ಗೆ ಅಪಘಾತವಾಗಿದ್ದು ಸ್ಥಿತಿ ಚಿಂತಾಜನಕವಾಗಿತ್ತು.
ಆ ನಂತರ ಗಾಯಾಳುವನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಹೆಚ್ಚಿನ ಚಿಕಿತ್ಸೆಗೆ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಅನೀಲ್ ಕೊನೆಯುಸಿರೆಳೆದರು
