Wednesday, August 12, 2026
Homeಜಿಲ್ಲಾಸುದ್ದಿಸಕಲೇಶಪುರ: ಗುಂಡಿಗಳಲ್ಲಿ ಬಾಳೆಗಿಡಗಳನ್ನ ನೆಟ್ಟು ಸರ್ಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ

ಸಕಲೇಶಪುರ: ಗುಂಡಿಗಳಲ್ಲಿ ಬಾಳೆಗಿಡಗಳನ್ನ ನೆಟ್ಟು ಸರ್ಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ

Telegram Group
Join Now

ಸಕಲೇಶಪುರ/ ಆಲೂರು: ಗುಂಡಿಗಳಲ್ಲಿ ಬಾಳೆಗಿಡಗಳನ್ನ ನೆಟ್ಟು ರಾಜ್ಯ ಸರ್ಕಾರದ ವಿರುದ್ಧ ಹಾಸನ ಜಿಲ್ಲೆಯ ಸಕಲೇಶಪುರ-ಆಲೂರು ತಾಲೂಕುಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಯ್ತು. ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಿನ್ನಳ್ಳಿ-ಅಬ್ಬನ ಗ್ರಾಮದಲ್ಲಿ ಪ್ರತಿಭಟನಾಕಾರರು ಕಿಡಿ ಕಾರಿದರು.

ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಗುಂಡಿ ಭಾಗ್ಯ ನೀಡಿದೆ, ಗ್ರೇಟರ್ ಬೆಂಗಳೂರು ಮಾಡುವ ಮೊದಲು ಗುಂಡಿಗಳನ್ನ ಮುಚ್ಚಲಿ ಅಂತಾ ಸಿಮೆಂಟ್ ಮಂಜು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಗ್ಯಾರಂಟಿ ಯೋಜನೆಗಳಿಗೆ ಅಭಿವೃದ್ಧಿಯ ಹಣವನ್ನ ವ್ಯಯ ಮಾಡಿದ್ದು, ಅಭಿವೃದ್ಧಿ ಅನ್ನೋದೇ ಮರೀಚಿಕೆ ಆಗಿದೆ ಅಂತಾ ಬಿಜೆಪಿ ಆರೋಪ ಮಾಡಿದೆ.

ಮಳೆಯಿಂದ ಮಲೆನಾಡಿನಲ್ಲಿ ಸಂಪೂರ್ಣವಾಗಿ ರಸ್ತೆಗಳು ಹಾಳಾಗಿದ್ದು, ಕೂಡಲೇ ವಿಶೇಷ ಅನುದಾನ ಮಾಡಬೇಕೆಂದು ಆಗ್ರಹಿಸಿದ್ರು. ಸರ್ಕಾರ, ದಲಿತ ವಿರೋಧಿ, ರೈತ ವಿರೋಧಿಯಾಗಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತಾ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರಾದ ಅಮಿತ್ ಶೆಟ್ಟಿ, ನೇತ್ರಾವತಿ ಮಂಜುನಾಥ್, ಕೃಷ್ಣಮೂರ್ತಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments