Monday, September 14, 2026
Homeಕ್ರೈಮ್ಸಕಲೇಶಪುರ: ಮತ್ತೆ ಮರಳು ದಂಧೆಕೋರರ ಗೂಂಡಾವರ್ತನೆ: ರೋಡ್ ಹಂಪ್‌ ಧ್ವಂಸ

ಸಕಲೇಶಪುರ: ಮತ್ತೆ ಮರಳು ದಂಧೆಕೋರರ ಗೂಂಡಾವರ್ತನೆ: ರೋಡ್ ಹಂಪ್‌ ಧ್ವಂಸ

Telegram Group
Join Now

ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಅಂಗನವಾಡಿ ಹಾಗೂ ಶಾಲಾ ಮಕ್ಕಳ ಸುರಕ್ಷತೆಗಾಗಿ ಹಾಕಿದ್ದ ರೋಡ್ ಹಂಪ್‌ಗಳನ್ನು ಅಕ್ರಮ ಮರಳು ದಂಧೆಕೋರರು ಧ್ವಂಸಗೊಳಿಸಿದ್ದಾರೆ.

ವೇಗವಾಗಿ ಸಂಚರಿಸುತ್ತಿದ್ದ ಮರಳು ತುಂಬಿದ ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ಗಳಿಗೆ ತೊಂದರೆ ಆಗುತ್ತಿದೆ ಎಂಬ ನೆಪದಲ್ಲಿ ಹಂಪ್ ತೆರವುಗೊಳಿಸಲಾಗಿದೆ.

ಗುದ್ದಲಿ, ಪಿಕಾಸಿಯಿಂದ ಹಂಪ್‌ಗಳನ್ನು ಹೊಡೆದು ಹಾಕಿ ರಸ್ತೆಗೂ ಹಾನಿ ಮಾಡಿರುವ ದುಷ್ಕರ್ಮಿಗಳು, ಗ್ರಾಮಸ್ಥರ ಸುರಕ್ಷತೆಯನ್ನು ಲೆಕ್ಕಿಸಿಲ್ಲ.ಮಕ್ಕಳ ಸುರಕ್ಷತೆಗೆ ಹಾಕಿದ್ದ ಹಂಪ್‌ಗಳನ್ನು ಒಡೆದು ಹಾಕಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದರೂ, ಗ್ರಾಮಸ್ಥರ ವಿರೋಧದಿಂದ ತೆರವು ನಿಲ್ಲಿಸಲಾಗಿತ್ತು. ಆದರೆ ಇದೀಗ ಯಾವುದೇ ಅನುಮತಿ ಇಲ್ಲದೆ ಏಕಾಏಕಿ ಹಂಪ್ ತೆರವುಗೊಳಿಸಲಾಗಿದೆ.

ಇದಕ್ಕೆ ಹೊಣೆ ಯಾರು? ಅಧಿಕಾರಿಗಳು ಕ್ರಮ ಕೈಗೊಳ್ಳುವರಾ? ಎಂದು ಕಾದುನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!