ಶೃಂಗೇರಿ: ಶಾಲೆಗೆಂದು ಹೊರಟಿದ್ದ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.
ಕಿಗ್ಗಾ ಶೃಂಗೇರಿ ಮಾರ್ಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ 10 ನೇ ತರಗತಿ ಬಾಲಕಿಯನ್ನು ಶೃಂಗೇರಿ ಪಟ್ಟಣಕ್ಕೆ ಡ್ರಾಪ್ ಕೊಡೋದಾಗಿ ಕಾರಲ್ಲಿ ಕೂರಿಸಿಕೊಂಡ ಕೋರನಕೊಡಿಗೆ ವಾಸಿ ಮಂಜುನಾಥ ಸ್ವಾಮಿ (65) ಎಂಬ ಕಾಮುಕನು ಕಾರಿನಲ್ಲಿ ಅಸಭ್ಯ ವರ್ತನೆ ತೋರಿದ್ದಾನೆ.
ಕೂಡಲೇ ಬಾಲಕಿ ಕಾರಿನ ಬಾಗಿಲು ತೆರೆದು ಹೊರ ಜಿಗಿದಿದ್ದಾಳೆ.ಕಾರಿನಿಂದ ಹಾರಿದ ಪರಿಣಾಮ ಬಾಲಕಿಯ ಕೈ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿ ಮಂಜುನಾಥ ಸ್ವಾಮಿಯನ್ನು ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿ,ಚಿಕ್ಕಮಗಳೂರಿಗೆ ಕಳಿಸಿದ್ದಾರೆ.
