Thursday, November 19, 2026
Homeಜಿಲ್ಲಾಸುದ್ದಿಮಾಕೋನಹಳ್ಳಿಯಲ್ಲಿ ಕಾರ್ಮಿಕನ ಮೇಲೆ ಕಾಡುಕೋಣ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ!

ಮಾಕೋನಹಳ್ಳಿಯಲ್ಲಿ ಕಾರ್ಮಿಕನ ಮೇಲೆ ಕಾಡುಕೋಣ ದಾಳಿ: ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ!

Telegram Group
Join Now

ಮೂಡಿಗೆರೆ: ಕೃಷ್ಣೇಗೌಡ ಎಂಬುವರಿಗೆ ಸೇರಿದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾಡುಕೋಣ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ  ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ನಡೆದಿದೆ.

ಸತ್ಯ ಎಂಬುವರಿಗೆ ಕಾಡುಕೋಣ ತಿವಿದು ಬೆನ್ನು, ಕಾಲು, ಕೈ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ

ಕಾಡುಕೋಣ ದಾಳಿ ನಡೆಸಿದಾಗ ಅನೇಕ ಕಾರ್ಮಿಕರು ಭಯಭೀತರಾಗಿ ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇತ್ತೀಚಿಗೆ ತಾಲೂಕಿನಲ್ಲಿ ಕಾಡುಕೋಣಗಳ ಕಾಟ ಹೆಚ್ಚಾಗಿದ್ದು ಬೇರೆ ಕಡೆಗೆ ಓಡಿಸಲು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!