ಚಿಕ್ಕಮಗಳೂರು:ಸಿವಿಲ್ ನ್ಯಾಯಾದೀಶರ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾಗುವ ಮೂಲಕ ನ್ಯಾಯಾಧೀಶೆಯಾಗಿ ಜಿಲ್ಲೆಯ ಹಿರೇಮಗಳೂರು ಯುವತಿ ಶ್ವೇತಾ ಆಯ್ಕೆಯಾಗಿದ್ದಾರೆ.
ಶ್ವೇತಾ ಅವರು ಹಿರೆಮಗಳೂರು ನಿವಾಸಿ ಈಶ್ವರಪ್ಪ ಹಾಗೂ ಕುಸುಮ ಡಿ ದಂಪತಿಗಳ ಪುತ್ರಿಯಾಗಿರುವ ಇವರು ಪ್ರೌಢ ಶಿಕ್ಷಣವನ್ನು ಸೆಂಟ್ ಜೋಸೆಫ್ ಕಾನ್ವೆಂಟ್ ಮತ್ತು ಕಾಲೇಜು ವ್ಯಾಸಂಗವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಶಿಕ್ಷಣವನ್ನು ಎಂ.ಇ.ಎಸ್. ಮಹಿಳಾ ಕಾಲೇಜಿನಲ್ಲಿ ಮುಗಿಸಿ ಹಾಸನ ಜಿಲ್ಲೆಯ ಪ್ರತಿಷ್ಟಿತಾ ಕೃಷ್ಣ ಕಾಲೇಜಿನಲ್ಲಿ ಶೇಕಡಾ 62. 52 ರಲ್ಲಿ ಉತ್ತಿರ್ಣರಾಗುವ ಮೂಲಕ ಕಾನೂನು ಪದವಿ ಮುಗಿಸಿರುತ್ತಾರೆ.

ಶ್ವೇತಾ ಅವರು ಪಟ್ಟಣದ ಪ್ರಖ್ಯಾತ ವಕೀಲರಾದ ಜೆರಾಲ್ಡ್ ಡಿಯಸ್ ಅವರೊಂದಿಗೆ ತರಬೇತಿ ಪಡೆದು ಚಿಕ್ಕಮಗಳೂರು ನ್ಯಾಯಾಲಯದಲ್ಲಿ ಸಹಾಯಕ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ನ್ಯಾಯಾಧೀಶ ಪರೀಕ್ಷೆಯನ್ನು ಶ್ರದ್ದೆ ಭಕ್ತಿಯಿಂದ ಸ್ವೀಕರಿಸಿದ ಶ್ವೇತಾ ಕಷ್ಟಪಟ್ಟು ಉನ್ನತ ಪ್ರಯತ್ನದಿಂದಾಗಿ ಕನಸನ್ನು ಈಡೇರಿಸಿಕೊಂಡಿದ್ದಾರೆ.

ಮಗಳ ಈ ಸಾಧನೆಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಗ್ರಾಮಕ್ಕೆ ಕೀರ್ತಿ ತಂದಿದ್ದು ಇವರಿಗೆ ವಕೀಲರ ಸಂಘ, ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರ ವತಿಯಿಂದ ಶುಭಾಶಯಗಳ ಮಹಪೂರ ಹರಿದು ಬಂದಿದೆ
