ಚಿಕ್ಕಮಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿ ತಂದೆಗೆ ಕಪಾಳ ಮೋಕ್ಷ ಮಾಡಿದ್ದಲ್ಲದೇ ಮಚ್ಚು ಹಿಡ್ಕೊಂಡ್ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕರಕನಹಳ್ಳಿಯಲ್ಲಿ ನಡೆದಿದೆ.
ಹೌದು .. ತಂದೆ ಕೃಷ್ಣೇಗೌಡಗೆ ಥಳಿಸಿದ ಪುತ್ರ ಯೋಗೇಶ್. ತಂದೆ ಅನ್ನೋದನ್ನ ನೋಡದೇ ಮನಸೋ ಇಚ್ಚೆ ಥಳಿಸಿದ್ದಲ್ಲದೇ ಪ್ಲೀಸ್ ಬಿಡು ಎಂದು ಹೇಳಿದರೂ ಅಂಗಲಾಚಿದ್ರೂ ಅಟ್ಯಾಕ್ ಮಾಡಿ ಥಳಿಸಿದ್ದಾನೆ
ತಂದೆ ಮೇಲಿನ ಅಮಾನವೀಯ ಕೃತ್ಯಕ್ಕೆ ಭಾರೀ ಖಂಡನೆ ವ್ಯಕ್ತವಾಗಿದ್ದು ಪುತ್ರ ಯೋಗೇಶ್ ನನ್ನ ಬಂಧಿಸುವಂತೆ ಆಗ್ರಹ ಪಡಿಸಿದ್ದಾರೆ.
ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
