Wednesday, March 4, 2026
Homeಆರೋಗ್ಯಶೃಂಗೇರಿ: ಅವ್ಯವಸ್ಥೆ ಅಗರವಾದ ಸರ್ಕಾರಿ ಆಸ್ಪತ್ರೆ:ಆಸ್ಪತ್ರೆಯಲ್ಲೂ ರೋಗಿಗಳಿಂದ ಹಣ ವಸೂಲಿ

ಶೃಂಗೇರಿ: ಅವ್ಯವಸ್ಥೆ ಅಗರವಾದ ಸರ್ಕಾರಿ ಆಸ್ಪತ್ರೆ:ಆಸ್ಪತ್ರೆಯಲ್ಲೂ ರೋಗಿಗಳಿಂದ ಹಣ ವಸೂಲಿ

ಶೃಂಗೇರಿ: ವ್ಯವಸ್ಥೆಯ ಅಗರವಾಗಿದೆ ಶೃಂಗೇರಿ ಪಟ್ಟಣದ ತಾಲೂಕು ಆಸ್ಪತ್ರೆ. ಜನಸ್ನೇಹಿ ಆಸ್ಪತ್ರೆಯಾಗಬೇಕಿದ್ದ ಈ ಆರೋಗ್ಯ ಕೇಂದ್ರ, ಜನವಿರೋಧಿ ಆಸ್ಪತ್ರೆಯಾಗುತ್ತಿರೋದು ನಿಜಕ್ಕೂ ವಿಪರ್ಯಾಸ. ಒಂದೆಡೆ ಸಾಲು ಸಾಲು ಅವ್ಯವಸ್ಥೆಯ ಅಗರವಾಗಿ ಮಾರ್ಪಟ್ಟರೇ, ಇನ್ನೊಂದೆಡೆ ಇರುವ ಬೆರಳೆಣಿಕೆಯ ಸಿಬ್ಬಂದಿ ಜನಸಾಮಾನ್ಯರ ಜೊತೆ ನಡೆದುಕೊಳ್ತಿರುವ ರೀತಿ ಭ್ರಮನಿರಸನ ತರಿಸಿದೆ. ಹೀಗಾಗಿ ಸಾರ್ವಜನಿಕರು ಸೇರಿದಂತೆ ಬಿಜೆಪಿ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಕುಂಟು ನೆಪ ಹೇಳುತ್ತಾ, ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಆಡಬೇಡಿ ಅನ್ನೋ ಮನವಿಯನ್ನ ಮಾಡಿದೆ. ವೈದ್ಯರ ಕೊರತೆ, ಆಂಬ್ಯುಲೆನ್ಸ್ ನಲ್ಲಿ ಹಣ ಸುಲಿಗೆ, ಆಸ್ಪತ್ರೆಗೆ ಬಂದ ರೋಗಿಗಳಿಂದ ಹಣ ವಸೂಲಿ, ರೋಗಿಗಳಿಗೆ ಸೌಲಭ್ಯ ಕೊಡದೇ ಇರೋದು, ರೋಗಿಗಳ ಜೊತೆ ಉಡಾಫೆ ವರ್ತನೆ ಸೇರಿದಂತೆ ಹಲವು ವಿಚಾರಗಳನ್ನ ಇಟ್ಟುಕೊಂಡು ಶೃಂಗೇರಿ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ, ಬಿಜೆಪಿ ಪ್ರತಿಭಟನೆ ಮಾಡಿದೆ.

ಮಾಜಿ ಸಚಿವ ಡಿ.ಎನ್ ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಶೃಂಗೇರಿ ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ವೇಣುಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೇಜವಾಬ್ದಾರಿ ವರ್ತನೆ ತೋರುತ್ತಿರುವ ಸಿಬ್ಬಂದಿಗಳನ್ನ, ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು, ಸ್ಥಳಕ್ಕಾಗಮಿಸಿದ ಡಿಹೆಚ್‌ಓ ಅಶ್ವಥ್ ಬಾಬು, ಆಗುತ್ತಿರೋ ಸಮಸ್ಯೆಗಳ ಬಗ್ಗೆ ಹಾಗೆ ಬೇಜವಾಬ್ದಾರಿ ತೋರುತ್ತಿರುವ ಸಿಬ್ಬಂದಿಗಳ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ರು. ಮೇ ಮೊದಲ ವಾರದಲ್ಲಿ ವೈದ್ಯರ ಕೊರತೆಯನ್ನ ನೀಗಿಸುವುದಾಗಿ ಭರವಸೆ ಕೊಟ್ಟರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!