Monday, February 9, 2026
Homeಕ್ರೈಮ್ಶೃಂಗೇರಿ: ನಿರಂತರ ಆನೆ ದಾಳಿಗೆ ಅಪಾರ ಪ್ರಮಾಣದ ಹಾನಿ: ಮಂಗಳವಾರ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆಗೆ...

ಶೃಂಗೇರಿ: ನಿರಂತರ ಆನೆ ದಾಳಿಗೆ ಅಪಾರ ಪ್ರಮಾಣದ ಹಾನಿ: ಮಂಗಳವಾರ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆಗೆ ಕರೆ!

ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೀರ್ಲು ಎಂಬ ಗ್ರಾಮದ ಅಡಲಕ್ಕಿ ಎಂಬಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಫಸಲು ಬಂದ ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದ್ದರೂ ಅರಣ್ಯ ಇಲಾಖೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿಭಾರತೀಯ ಜನತಾ ಪಾರ್ಟಿ ವತಿಯಿಂದ ಕೆರೆಕಟ್ಟೆ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಲು ನಿರ್ಧರಿಸಲಾಗಿದೆ.

ಹೌದು .. ಕೆರೆ ಪಂಚಾಯತ್ ನ ಶಿರ್ಲು ಗ್ರಾಮದಲ್ಲಿ ಕಳೆದ 15 ದಿನದಿಂದ ಆನೆ ಶಿರ್ಲು ಗ್ರಾಮದ ಅಣಲಕ್ಕಿ ಶಿತು ಸಹೋದರಿಯರು ಆದ ಬರೀ ಮಹಿಳೆಯರೇ ವಾಸವಿರುವ ಕುಟುಂಬದವರ ಮನೆ ಎದುರು ಕಷ್ಟಪಟ್ಟು ಸಾಗುವಳಿ ಮಾಡಿದ ಭತ್ತದ ಗದ್ದೆ ಸಂಪೂರ್ಣ ನಾಶ ಮಾಡಿದೆ.

ಇಲಾಖೆ ಗೆ ಹಲವು ಬಾರಿ ಮನವಿ ಮಾಡಿದರು ಅವರಲ್ಲಿ ಇರುವ ಎರಡು ಮುರು ಜನ ಅಧಿಕಾರಿಗಳು ಪಟಾಕಿ ತಂದು ಹೊಡೆದು ಹೋಗುತ್ತಿದ್ದು ಯಾವುದೇ ಪ್ರಯೋಜನ ಆಗಿಲ್ಲಾ ಅಲ್ಲಿ ಇನೊಂದು ಅನಾಹುತ ಆಗುವ ಸೂಚನೆ ಇದೇ ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಇಟಿಯಫ್ ಕಲಿಸಿದ್ದೇವೆ ಎಂದು ಸಬೂಬು ಹೇಳುತಿದ್ದು
ಯಾವುದೇ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ಕೊಡದೇ ಇರುವುದರಿಂದ ಅದೇ ಗ್ರಾಮದ ದಲ್ಲಿ ಒಬ್ಬ ಮಹಿಳಾ ಮತ್ತು ಒಬ್ಬ ಪುರುಷ ಗ್ರಾಮಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಇಂದು ಸಭೆ ಮಾಡಿದರು.

ನಾಳೆ ಬೆಳಿಗ್ಗೆ 9ಗಂಟೆಯಿಂದಾ ವಲಯಾರಣ್ಯಾಧಿಕಾರಿ ಗಳ ಕಚೇರಿ ಮುಂದೆ ಧರಣಿ ಕುರಲು ತೀರ್ಮಾನಿಸಿದ್ದು ಇದಕ್ಕೆ ಭಾರತಿಯಾ ಜನತಾ ಪಕ್ಷದ ವತಿಯಿಂದ ಸಂಪೂರ್ಣ ಬೆಂಬಲ ನೀಡಲು ಕರೆ ಪಂಚಾಯತ್ ಭಾರತೀಯ ಜನತಾ ಪಾರ್ಟಿಯಾ ಸ್ಥಾನಿಯ ಸಮಿತಿ ಮತ್ತು ತಾಲೂಕು ಭಾರತಿಯಾ ಜನತಾ ಪಾರ್ಟಿ ಬೆಂಬಲ ಸೂಚಿಸಿರುತ್ತದೆ ಹಾಗೆ ಎಲ್ಲಾ ಕೆರೆ ಪಂಚಾಯಿತಿಯ ಗ್ರಾಮಸ್ಥರು ಹಾಗೂ ತಾಲೂಕಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕೈ ಜೋಡಿಸಲಿದ್ದಾರೆ.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!