ಶೃಂಗೇರಿ: ಕಾಂಗ್ರೆಸ್ ನಿಂದ ಹಾಗೂ ಶಾಸಕರಿಂದ ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವಾಗಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಭಟ್ ತಿಳಿಸಿದ್ದಾರೆ.

ಕೊಪ್ಪದ ಮಹಾಬಲ ರಾವ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರಕಟಿಸಿ ನಂತರ ಕಡೆ ಕ್ಷಣದಲ್ಲಿ ಪ್ರಶಸ್ತಿ ವಾಪಸ್ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಪತ್ರಿಕಾಗೋಷ್ಠಿ ನಡೆಸಿ ಇದರ ಹಿಂದೆ ಕಾಂಗ್ರೆಸ್ ಶಾಸಕರ ಕೈವಾಡ ಇದೆ ಎಂದು ಆರೋಪಿಸಿತ್ತು ಬಿಜೆಪಿ ಪತ್ರಿಕಾಗೋಷ್ಠಿಗೆ ಕೌಂಟರ್ ಆಗಿ ಇಂದು ಶೃಂಗೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಕೌಂಟರ್ ನೀಡಿದೆ ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಭಟ್ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರು ಡಿ ಎನ್ ಜೀವರಾಜ್ ಹಾಗೂ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ
ಅಧಿಕಾರ ಇದ್ದಾಗ ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಿದ ಬಿಜೆಪಿ ಪಕ್ಷದ ಎಲ್ಲಾ ಪ್ರಮುಖ ಹುದ್ದೆಗಳಿಂದ ಬ್ರಾಹ್ಮಣ ಸಮುದಾಯವನ್ನು ದೂರವಿಟ್ಟಿದೆ ಮುಂದಿನ ಚುನಾವಣೆಯಲ್ಲೂ ರಾಜೇಗೌಡರು ಗೆಲ್ಲುವ ಭಯದಿಂದ ಬಿಜೆಪಿ ಈ ತರಹದ ಅಪಪ್ರಚಾರವನ್ನು ಮಾಡುತ್ತಿದ್ದು ಅರ್ಹತೆ ಇದ್ದವರಿಗೆ ಅರ್ಹತೆ ಮೇಲೆ ಪ್ರಶಸ್ತಿ ಲಭಿಸಿದೆ
ಮಹಾಬಲ ರಾವ್ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿಲ್ಲ ಅವರು ಕೇವಲ ನಾಮ ನಿರ್ದೇಶನಗೊಂಡು ಆಯ್ಕೆ ಆಗಿದ್ದಾರೆ ಅಷ್ಟೇ ಹೀಗಿರುವಾಗ ಪ್ರಶಸ್ತಿ ಆಯ್ಕೆಗೆ ಮಾನದಂಡಗಳನ್ನು ಅನುಸರಿಸಿ ಆಯ್ಕೆ ಸಮಿತಿ ಅವರನ್ನು ಕೈಬಿಟ್ಟಿದೆ
ಬಿಜೆಪಿಗರು ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸುತ್ತಾ ಬಂದಿದ್ದು ಈ ಹಿಂದೆ ಹಲವರು ಪ್ರಶಸ್ತಿಗೆ ಬಾಜನರಾದಾಗ ಅಭಿನಂದಿಸಲು ಬಿಜೆಪಿ ಮುಂದಾಗಲಿಲ್ಲ ಕಾಂಗ್ರೆಸ್ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಶಾಸಕ ರಾಜೆಗೌಡರು ಗೌರವದಿಂದ ನಡೆಸಿಕೊಂಡಿದ್ದು ಹಲವು ಜವಾಬ್ದಾರಿಗಳನ್ನು ನೀಡಿದ್ದಾರೆ ಪ್ರಶಸ್ತಿಯನ್ನು ಎಲ್ಲರಿಗೂ ನೀಡಲಾಗಲ್ಲ ಅರ್ಹತೆ ಮೇಲೆ ಪ್ರಶಸ್ತಿ ಲಭಿಸುತ್ತದೆ ಹಾಗಂತ ಕೇವಲ ಕಾಂಗ್ರೆಸ್ನವರಿಗೆ ಪ್ರಶಸ್ತಿ ನೀಡಲಾಗಿಲ್ಲ ಬದಲಾಗಿ ಬಿಜೆಪಿಗೆ ಪ್ರಶಸ್ತಿ ನೀಡಲಾಗಿದೆ ಅದರಲ್ಲೂ ಬ್ರಾಹ್ಮಣರಿಗೆ ಪ್ರಶಸ್ತಿ ಲಭಿಸಿದೆ ಎಂದುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್ ಆಕ್ರೋಶವ್ಯಕ್ತಪಡಿಸಿದರು
ಈಗಾಗಲೇ ನರಸಿಂಹರಾಜಪುರದ ಶಂಕರ ಭಾರತಿ ಸಮುದಾಯ ಭವನಕ್ಕೆ ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ ಜೊತೆಗೆ ಸಮುದಾಯದ ಹಲವರಿಗೆ ಪ್ರಶಸ್ತಿ ಸ್ಥಾನಮಾನ ಕೊಟ್ಟು ಸಮುದಾಯಕ್ಕೆ ಗೌರವ ತೋರಿಸಿದ್ದಾರೆ ಬಿಜೆಪಿಯ ಕಾಲಾವಧಿಯಲ್ಲಿ ಸಮುದಾಯದವರನ್ನೆಲ್ಲಾ ಹೇಗೆ ನಡೆಸಿಕೊಂಡಿದ್ದಾರೆ ಮೂಲೆಗುಂಪು ಮಾಡಿದ್ದಾರೆ ಎಂಬ ಅರಿವಿದೆ ಇದನ್ನು ಚರ್ಚಿಸಲು ವೇದಿಕೆ ನಿರ್ಮಾಣವಾದರೆ ನಾವು ಸಿದ್ದರಿದ್ದೇವೆ ಎಂದು ರವಿಶಂಕರ್ ಗುಡುಗಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಭಟ್ ರವಿಶಂಕರ್ ನಾರಾಯಣ್ ಸುಬ್ರಹ್ಮಣ್ಯ ಅಂಬಲ ಮನೆ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ವಿಠಲ್ ಶೃಂಗೇರಿ
7676798969
