Sunday, August 16, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ ಸುತ್ತಮುತ್ತಲಿನ ಪರಿಸರದ ಉಳಿವಿಗಾಗಿ ಹೊಸ ನಿಯಮ ಜಾರಿಗೊಳಿಸಲು ಸ್ಥಳೀಯರ ಒತ್ತಾಯ

ಕೊಟ್ಟಿಗೆಹಾರ ಸುತ್ತಮುತ್ತಲಿನ ಪರಿಸರದ ಉಳಿವಿಗಾಗಿ ಹೊಸ ನಿಯಮ ಜಾರಿಗೊಳಿಸಲು ಸ್ಥಳೀಯರ ಒತ್ತಾಯ

Telegram Group
Join Now

ಮೂಡಿಗೆರೆ : ಕೊಟ್ಟಿಗೆಹಾರದ ದೇವನ ಗುಲ್ ಬಳಿ, ನಿರ್ಮಲ ತೋಟ ಹತ್ತಿರ ಇರುವ ಅಸ್ಘರ್ ಅಹಮದ್ ಅವರ ತೋಟದ ಪಕ್ಕ ಹೆದ್ದಾರಿ ಮಾರ್ಗದ ಪಕ್ಕದಲ್ಲೇ ಮಧ್ಯಪಾನ ಮೋಜಿನಲ್ಲಿ ತೊಡಗಿದ್ದ ಕೆಲ ಕಿಡಿಗೇಡಿಗಳು ಬಾಟಲ್‌ಗಳು, ಪ್ಲಾಸ್ಟಿಕ್ ಪಾರ್ಸಲ್‌ಗಳು ಹಾಗೂ ಇತರ ಕಸದ ರಾಶಿಯನ್ನು ಅಡ್ಡಾಡದ ರೀತಿಯಲ್ಲಿ ಎಸೆದು ಹೋಗಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಮಧ್ಯಪಾನದ ಗಾಜಿನ ಬಾಟಲ್ಸ್, ಕಸ ಎಸೆತದಿಂದ ಪರಿಸರ ಹಾಳು: ಕಿಡಿಗೇಡಿಗಳ ಅಸಭ್ಯ ಕೃತ್ಯಕ್ಕೆ ಸಾರ್ವಕನಿಕರ ವಲಯ ತೀವ್ರವಾಗಿ ಖಂಡಿಸಿದ್ದಾರೆ

ಅಸ್ಘರ್ ಅಹಮದ್ ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುವುದು ಕಾನೂನು ಬಾಹಿರವಾಗಿದೆ

ಸೀಸದ ಬಾಟಲ್‌ ಹಾಗೂ ಪ್ಲಾಸ್ಟಿಕ್ ಕಸವನ್ನು ಎಸೆಯುವುದು ಪ್ರಕೃತಿ ಮತ್ತು ಸ್ಥಳೀಯ ಸೌಂದರ್ಯಕ್ಕೆ ದೊಡ್ಡ ಹಾನಿ ಮಾಡುತ್ತದೆ, ಎಂದು ಹೇಳಿದರು.

ಕಸದಿಂದ ಪ್ರದೇಶದ ಶುಚಿತ್ವ ಹಾನಿಗೊಳಗಾಗಿರುವುದನ್ನು ಕಂಡ ಸ್ಥಳೀಯರು, ಇಂತಹ ಅಸಭ್ಯ ಕೃತ್ಯಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳ ರಕ್ಷಣೆ ಮತ್ತು ಪರಿಸರದ ಆರೈಕೆಗೆ ಕಠಿಣ ನಿಯಮ ಜಾರಿಗೆ ಬರಬೇಕೆಂಬ ಬೇಡಿಕೆ ಪ್ರದೇಶದಲ್ಲಿ ಜೋರಾಗಿ ಕೇಳಿಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments