Saturday, March 28, 2026
Homeಜಿಲ್ಲಾಸುದ್ದಿಶೃಂಗೇರಿ: ಗಾಂಧಿಮೈದಾನ ವರ್ತಕರ ನೆರವಿಗೆ ಬಂದ ವಿಶ್ವನಾಥ್ ಗದ್ದೆಮನೆ

ಶೃಂಗೇರಿ: ಗಾಂಧಿಮೈದಾನ ವರ್ತಕರ ನೆರವಿಗೆ ಬಂದ ವಿಶ್ವನಾಥ್ ಗದ್ದೆಮನೆ

ಶೃಂಗೇರಿ: ಪಟ್ಟದ ಗಾಂಧಿಮೈದಾನದಲ್ಲಿನ ಅಂಗಡಿಗಳ ತೆರವಿನಿಂದ ಅತಂತ್ರವಾಗಿದ್ದ 26 ಕುಟುಂಬಗಳ ಸಹಾಯಕ್ಕೆ ವಿಶ್ವನಾಥ್ ಗದ್ದೆಮನೆ ಬಂದಿದ್ದಾರೆ.


ಅ.23 ರ ಗುರುವಾರ ಶೃಂಗೇರಿಯಲ್ಲಿ ಗಾಂಧಿಮೈದಾನದ ನೊಂದ ವರ್ತಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ವಿಶ್ವನಾಥ್ ಗದ್ದೆಮನೆ,ನೊಂದ ಕುಟುಂಬಗಳ ಜೊತೆ ಸದಾ ಇರುವುದಾಗಿ ತಿಳಿಸಿದ್ದಾರೆ, ಅಂಗಡಿಗಳನ್ನು ಕಳೆದುಕೊಂಡ ವರ್ತಕರಿಗೆ ಧನ ಸಹಾಯ ಮಾಡಿದರು.


ವಿಶ್ವನಾಥ್ ಗದ್ದೆಮನೆಯವರು ಮಾಡಿದ ಸಹಾಯಕ್ಕೆ ವರ್ತಕರು ಧನ್ಯವಾದ ತಿಳಿಸಿದರು.
ವಕೀಲರಾದ ವಿಶ್ವನಾಥ್ ಗದ್ದೆಮನೆಯವರು ವರ್ತಕರ ಕಾನೂನು ಹೋರಾಟದಲ್ಲಿ ಅಗತ್ಯಬಿದ್ದರೆ ಸಹಕರಿಸುವುದಾಗಿ ತಿಳಿಸಿದರು. ಯಾರೂ ಕೂಡ ಈ ಸಂಕಷ್ಟದಿಂದ ಎದೆಗುಂದದೆ ನ್ಯಾಯಕ್ಕಾಗಿ ಹೋರಾಡೋಣ,ಇಷ್ಟು ವರ್ಷಗಳ ನಿಮ್ಮೆಲ್ಲರ ಪರಿಶ್ರಮಕ್ಕೆ ದೇವರು ಒಳಿತನ್ನೇ ಮಾಡುತ್ತಾನೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಹಾಗೂ ಸಹಕಾರಿ ನಾಯಕ ರಾಮಸ್ವಾಮಿ ಶೆಟ್ಟಿಗದ್ದೆ,ವಿಶ್ವಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲಾಧ್ಯಕ್ಷರಾದ ಸುರೇಶ್, ವಿಶ್ವಹಿಂದೂ ಪರಿಷದ್ ಹಾಸನ ವಿಭಾಗ ಕಾರ್ಯದರ್ಶಿಗಳಾದ ಮಹೇಂದ್ರ,ವಿಶ್ವ ಹಿಂದೂ ಪರಿಷದ್ ಶೃಂಗೇರಿ ಜಿಲ್ಲಾ ಕಾರ್ಯದರ್ಶಿಗಳಾದ ದಿವೀರ್ ಮಲ್ನಾಡ್ ಹಾಗೂ ತಾಲೂಕು ಸಹ ಸಂಯೋಜಕರಾದ ಸಂತೋಷ್ ಕೆರೆಮನೆ ಇವರುಗಳು  ಉಪಸ್ಥಿತರಿದ್ದರು.

ವರದಿ: ವಿಠಲ್‌ ಶೃಂಗೇರಿ

7676879869

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!