Tuesday, August 11, 2026
Homeಕ್ರೈಮ್ತರೀಕೆರೆ: ಹಣ, ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

ತರೀಕೆರೆ: ಹಣ, ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

Telegram Group
Join Now

ತರೀಕೆರೆ:ಯರೇಹಳ್ಳಿ ತಾಂಡದ ಮನೆಯಲ್ಲಿದ್ದ 96 ಗ್ರಾಂ ಚಿನ್ನಾಭರಣ, 8 ಸಾವಿರ ನಗದನ್ನು ದೋಚಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಯರೇಹಳ್ಳಿ ರಾಮಕೃಷ್ಣ (32), ಮೇಘರಾಜ್ (25) ಬಂಧಿತ ಆರೋಪಿಗಳು.

ಕಳ್ಳರ ಪತ್ತೆಗಾಗಿ ತರೀಕೆರೆ ಠಾಣಾ ಅಧಿಕಾರಿ, ಸಿಬ್ಬಂದಿಯ ವಿಶೇಷ ತಂಡ ರಚಿಸಲಾಗಿತ್ತು.

ತಂಡವು ಆರೋಪಿಗಳಾದ ಅದೇ ಗ್ರಾಮದ ರಾಮಕೃಷ್ಣ, ಮೇಘರಾಜ್ ಎಂಬುವರನ್ನು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಅವರಿಂದ 9.63 ಲಕ್ಷ ಮೌಲ್ಯದ ಚಿನ್ನಾಭರಣ, 4,400 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ತರೀಕೆರೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್, ಪಿಎಸ್ಐಗಳಾದ ಮಂಜುನಾಥ್, ಮನ್ನಂಗಿ, ದೇವೇಂದ್ರ ರಾಥೋಡ್, ಸಿಬ್ಬಂದಿ ಎಚ್.ಸಿ. ರಾಮಪ್ಪ, ರುದ್ರೇಶ್, ರಿಯಾಜ್, ಧನಂಜಯ ಸ್ವಾಮಿ, ಶ್ರೀನಿವಾಸ, ಜಿಲ್ಲಾ ಕಚೇರಿ ತಾಂತ್ರಿಕ ಸಿಬ್ಬಂದಿ ರಬ್ಬಾನಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments