Sunday, August 9, 2026
Homeಕ್ರೈಮ್ತಮಿಳುನಾಡು ಮೂಲದ ಕಾರ್ಮಿಕರಿಂದ ತೋಟದ ಮಾಲೀಕ ಬಕ್ಕಿ ಸುಮಂತ್ ಮೇಲೆ ತೀವ್ರ ಹಲ್ಲೆ

ತಮಿಳುನಾಡು ಮೂಲದ ಕಾರ್ಮಿಕರಿಂದ ತೋಟದ ಮಾಲೀಕ ಬಕ್ಕಿ ಸುಮಂತ್ ಮೇಲೆ ತೀವ್ರ ಹಲ್ಲೆ

Telegram Group
Join Now

ಮೂಡಿಗೆರೆ : ತಾಲೂಕಿನ ಬಣಕಲ್ ಹೋಬಳಿ ಬಕ್ಕಿ ಗ್ರಾಮದ ಸುಮಂತ್ ಎಂಬುವರ ಮೇಲೆ ತಮಿಳುನಾಡು ಮೂಲದ ಕಾರ್ಮಿಕರು ಹಲ್ಲೆ ನಡೆಸಿರುವ ಘಟನೆ ಕಂಡುಬಂದಿದೆ.

ಸುಮಂತ್(46) ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಬಕ್ಕಿ ಗ್ರಾಮದವರಾಗಿದ್ದು ಅಪರಿಚಿತ ವ್ಯಕ್ತಿಗಳು ತಮ್ಮ ತೋಟದಲ್ಲಿರುವುದನ್ನ ಗಮನಿಸಿ ಪ್ರಶ್ನಿಸಿದ್ದಕ್ಕೆ ಸುಮಾರು 50ಕ್ಕೂ ಹೆಚ್ಚು ಮಂದಿ ಏಕಾಏಕಿ ದಾಳಿ ನಡೆಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ಆರೋಪಿಸಿದ್ದಾರೆ.

ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿರುವ ತಮಿಳರ ವಿರುದ್ಧ ಸಂಘ ಸಂಸ್ಥೆಗಳು ಆಕ್ರೋಶ ಹೊರಹಾಕಿವೆ

ಸುಮಂತ್ ಅವರಿಗೆ ಎದೆ ಭಾಗ ಹಾಗೂ ಬಲಗೈ, ಕುತ್ತಿಗೆ ಭಾಗಗಳಿಗೆ ತೀವ್ರ ಪೆಟ್ಟು ಬಿದಿದ್ದು ಪ್ರಥಮ ಚಿಕಿತ್ಸೆಗೆ ಮೂಡಿಗೆರೆಯ ಸಾರ್ವಜನಿಕರ ಆಸ್ಪತ್ರೆ ದಾಖಲಿಸಿಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಆಸ್ಪತ್ರೆಗೆ ತೆರಳುವಂತೆ ವೈದ್ಯರ ಸಲಹೆ ನೀಡಿದ್ದಾರೆ

ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments