Thursday, October 22, 2026
Homeಜಿಲ್ಲಾಸುದ್ದಿಶಾಸಕಿ ನಯನಾ ಭಾಗಿಯಾಗಿ ಶತಮಾನೋತ್ಸವ ಆಚರಿಸಿದ ಶಾಲೆಯೊಂದರಲ್ಲಿ ಹೆಣ್ಣುಮಕ್ಕಳ ಶೌಚಾಲಯಕ್ಕಿಲ್ಲ ಭದ್ರತೆ!

ಶಾಸಕಿ ನಯನಾ ಭಾಗಿಯಾಗಿ ಶತಮಾನೋತ್ಸವ ಆಚರಿಸಿದ ಶಾಲೆಯೊಂದರಲ್ಲಿ ಹೆಣ್ಣುಮಕ್ಕಳ ಶೌಚಾಲಯಕ್ಕಿಲ್ಲ ಭದ್ರತೆ!

Telegram Group
Join Now

ಮೂಡಿಗೆರೆ: ಸಾವಿರಾರು ಜನರ ಸಮ್ಮುಖದಲ್ಲಿ ಇತ್ತೀಚಿಗೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಸರ್ಕಾರಿ ಶಾಲೆಯೊಂದರಲ್ಲಿ ಹೆಣ್ಣು ಮಕ್ಕಳ ಶೌಚಾಲಯಕ್ಕೆ ಭದ್ರತೆ ಇಲ್ಲಾ ಎಂಬುದು ನಿಜಕ್ಕೂ ನೋವಿನ ಸಂಗತಿ

ಹೌದು ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ದಿನಗಳಲ್ಲಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಸಾಕಷ್ಟು ಭರವಸೆ ಮೂಡಿಸಿದ್ದ ಶಾಲೆಯೊಂದರ ಪರಿಸ್ಥಿತಿ ಇದಾಗಿದೆ ಎಂದರೆ ನಂಬಲೇಬೇಕು.

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದ ಬಾಗಿಲುಗಳು ಮುರಿದು ಬಿದ್ದಿದ್ದು ಹೆಣ್ಣು ಮಕ್ಕಳು ಬಳಸುವ ಶೌಚಾಲಯದಲ್ಲಿ ಭದ್ರತೆ ಇಲ್ಲದೆ ವಿದ್ಯಾರ್ಥಿನಿಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೂರು ವರ್ಷಗಳ ಇತಿಹಾಸವಿರುವ ಮತ್ತು ಶಾಸಕರು ಭಾಗವಹಿಸಿದ ಕಾರ್ಯಕ್ರಮ ನಡೆದ ಶಾಲೆಯಲ್ಲೇ ಹೆಣ್ಣುಮಕ್ಕಳ ಮೂಲಸೌಕರ್ಯಗಳ ನಿರ್ಲಕ್ಷ್ಯ ನಡೆದಿರುವುದು ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ.

ಇತ್ತೀಚಿಗೆ ಲಕ್ಷಾನುಗಟ್ಟಲೆ ಹಣ ವ್ಯಹಿಸಿ ಕಾರ್ಯಕ್ರಮ ಆಚರಿಸಿ ಅನೇಕ ಗಣ್ಯರನ್ನು ಶಾಲಾ ಮುಖ್ಯೋಪಾಧ್ಯಯರು  ಹಾಗೂ ಆಡಳಿತ ಮಂಡಳಿ ಜನಪ್ರಿಯಾ ನಾಯಕಿ ನಯನಾ ಮೋಟಮ್ಮ, ಮಾಜಿ ಉಪ ಸಭಾಪತಿ ಎಂ. ಕೆ. ಪ್ರಾಣೇಶ್, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಖ್ಯಾತ ಅವದೂತ ಶ್ರೀ ವಿನಯ್ ಗುರೂಜಿ ಗೌರಿಗದ್ದೆ ಸೇರಿದಂತೆ ಅನೇಕ ಅತಿಥಿ ಮಹಾಶಿಯರಿಗೆ ಆಹ್ವಾನಿಸಿ ಕಾರ್ಯಕ್ರಮ ಮುಗಿಸಿದ್ದರೂ, ಕಾರ್ಯಕ್ರಮದಲ್ಲಿ ಶಾಲೆಯ ಕುರಿತು ಗಣ್ಯರು ತಮ್ಮಗಳ ಭಾಷಣದಲ್ಲಿ ಶಾಲೆಯ ಕುರಿತು ಉದ್ದುದ್ದ ಭಾಷಣ ಬಿಗಿದು ಹೋಗಿದ್ದು ಅಭಿವೃದ್ಧಿ ಎಂಬುದು ಶೂನ್ಯ ದಲ್ಲೇ ಉಳಿದಿದೆ… ಭಾರತ ದೇಶದಲ್ಲಿ ಹೆಣ್ಣನ್ನು ಪೂಜಿಸುವ ಮನಸ್ಥಿತಿ ಇರುವ ಜನರಿದ್ದು.. ಭದ್ರತೆ ಇಲ್ಲದೆ ಇರುವ ಶೌಚಾಲಯ ಬಳಸುವ ಹೆಣ್ಣು ಮಕ್ಕಳ ಪರಿಸ್ಥಿತಿ ನಿಜಕ್ಕೂ ನೋವಿನ ಸಂಗತಿಯಾಗಿದೆ.ಅದಲ್ಲದೆ ಶಾಲೆಯ ಹಂಚುಗಳು ಬೀಳುವ ಪರಿಸ್ಥಿತಿ ಯಲ್ಲಿದ್ದು ಅಪಾಯಕ್ಕೆ ಎಡೆ ಮಾಡಿಕೊಡುವಂತಿವೆ.

ಪ್ರಚಾರದ ಹುಚ್ಚಿಗೆ ಜನಪ್ರತಿನಿಧಿಗಳು ಶಾಲೆಯ ಕುರಿತು ವಿವಿಧ ಭರವಸೆ ನೀಡಿದ್ದು ಎಲ್ಲವು ಗಾಳಿಗೆ ತೇಲಿ ಹೋಗಿರುವುದು ಅಷ್ಟೇ ಸತ್ಯವಾಗಿದೆ

ಕೆಲವರು ರಾತ್ರಿ ವೇಳೆ ಶಾಲಾ ಹಿಂಭಾಗದಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹೋಗುತ್ತಾರೆ. ಶೌಚಾಲಯಕ್ಕೆ ಹೋಗಲು ಕಷ್ಟವಾಗುತ್ತದೆ. ಶೌಚಾಲಯಗಳ ಬಾಗಿಲು ಮುರಿದುಬಿದ್ದಿವೆ, ಪಕ್ಕದಲ್ಲಿ ಸೊಸೈಟಿ ಹಾಗೂ ಧರ್ಮಸ್ಥಳ ಸಂಘದ ಕಛೇರಿ ಇದೆ. ಆನೇಕರು ಓಡಾಡುತ್ತಿರುತ್ತಾರೆ ಆದ್ದರಿಂದ ಶೌಚಾಲಯ ಉಪಯೋಗಿಸಲು ಮುಜುಗರವಾಗುತ್ತದೆ ಎಂದು ವಿದ್ಯಾರ್ಥಿನಿ ದೂರಿದ್ದಾರೆ

ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಭಾಷಣಗಳನ್ನು ಮಾಡುವ ಜನಪ್ರತಿನಿಧಿಗಳ ಕ್ಷೇತ್ರದಲ್ಲೇ ಇಂತಹ ಸ್ಥಿತಿ ಇರುವುದು ವ್ಯವಸ್ಥೆಯ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.

 

ವಿದ್ಯಾರ್ಥಿನಿಯರ ಘನತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ಕೂಡಲೇ ಶಾಲಾ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಶೌಚಾಲಯಗಳನ್ನು ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ವರದಿ ಪುನೀತ್ ಕಡಿದಾಳು
    9483811948

    RELATED ARTICLES

    LEAVE A REPLY

    Please enter your comment!
    Please enter your name here

    - Advertisment -

    Most Popular

    Recent Comments

    error: Content is protected !!