Friday, March 27, 2026
Homeಜಿಲ್ಲಾಸುದ್ದಿಅತ್ತಿಕೊಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಗೆ ಸ್ವಾಗತ: ಅಧ್ಯಕ್ಷ ಹೆಚ್ ವಿ...

ಅತ್ತಿಕೊಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಗೆ ಸ್ವಾಗತ: ಅಧ್ಯಕ್ಷ ಹೆಚ್ ವಿ ಸುಂದರಮೂರ್ತಿ

ಕೊಪ್ಪ: ಅತ್ತಿಕೊಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ)ದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಗೆ ಸಂಘದ ಸರ್ವ ಸದಸ್ಯರು ಭಾಗವಹಿಸುವಂತೆ ಸಂಘದ ಉಪಾಧ್ಯಕ್ಷರು , ಎಲ್ಲಾ ನಿರ್ದೇಶಕರುಗಳ ಹಾಗೂ ಸಿಇಓ , ಸಿಬ್ಬಂದಿಗಳ ಪರವಾಗಿ ಸ್ವಾಗತ ಕೋರಿ ಮಾತನಾಡಿದ ಸಂಘದ ಅಧ್ಯಕ್ಷರಾದ ಹೆಚ್ ವಿ ಸುಂದರಮೂರ್ತಿಯವರು ಕೃಷಿ ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಕ್ಕಾಗಿ ಸಾಲಗಾರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.

ಠೇವಣಿ ಸಂಗ್ರಹಣೆ, ಸಾಲ ವಸೂಲಾತಿ ಮತ್ತು ವ್ಯಾಪಾರ ವಿಭಾಗದಲ್ಲಿ ಉತ್ತಮ ಬೆಳವಣಿಗೆಯಾಗುತ್ತಿದೆ.
ಸಂಘದ ಅಭಿವೃದ್ಧಿಗೆ ಸಹಕರಿಸಿದ ಶಾಸಕರಿಗೆ, ಸಂಸದರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ ಸ್ಥಳೀಯ ಅತ್ತಿಕೊಡಿಗೆ ಹಾಗೂ ಗುಡ್ಡೇತೋಟ ಪಂಚಾಯತಿ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಮತ್ತು ಗ್ರಾಹಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಮುಂದೆಯೂ ಸಹ ಇದೇ ರೀತಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿ ವಾರ್ಷಿಕ ಮಹಾಸಭೆಗೆ ಎಲ್ಲಾ ಸಂಘದ ಸದಸ್ಯರು ಭಾಗವಹಿಸಬೇಕೆಂದು ಮನವಿ ಮಾಡಿದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!