Tuesday, August 11, 2026
Homeಜಿಲ್ಲಾಸುದ್ದಿಶೃಂಗೇರಿ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟ ಕಾಡಾನೆಗಳು: ಮಾರನಕೊಡಿಗೆ, ಕುಂಚೇಬೈಲು ಭಾಗದಲ್ಲಿ ಬೆಳೆ ನಾಶ

ಶೃಂಗೇರಿ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟ ಕಾಡಾನೆಗಳು: ಮಾರನಕೊಡಿಗೆ, ಕುಂಚೇಬೈಲು ಭಾಗದಲ್ಲಿ ಬೆಳೆ ನಾಶ

Telegram Group
Join Now

ಚಿಕ್ಕಮಗಳೂರು:ಕಳೆದ ಕೆಲ ದಿನಗಳಿಂದ ಕೊಪ್ಪ, ಜಯಪುರ, ಬಾಳೆಹೊನ್ನೂರು, ಭಾಗದಲ್ಲಿ ಕಾಡಾನೆಗಳು ಸಂಚರಿಸಿದ್ದು ರೈತರ ಬೆಳೆ ನಾಶ ಮಾಡಿ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿ ಮಾಡಿತ್ತು. ಈಗ ಶೃಂಗೇರಿ ತಾಲೂಕಿಗೆ ಎಂಟ್ರಿ ಕೊಟ್ಟಿದ್ದು ಕಳೆದ ರಾತ್ರಿ ತಾಲೂಕಿನ ಮಾರನಬೈಲು, ಕುಂಚೇಬೈಲು ಭಾಗದಲ್ಲಿ ಸಂಚಾರ ನಡೆಸಿವೆ.

ಹೌದು .. ಕಳೆದ ರಾತ್ರಿ ಜಯಪುರ ಸಮೀಪದ ಕುಳೂರು ಶೇಷಪ್ಪಗೌಡ ಅವರ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದ್ದು ಹಾಗೆ ಇಂದು ಬೆಳಗ್ಗೆ ಕುಂಚೇಬೈಲಿನ ಹೊಸೂರಿನ ಸುಭ್ರಮಣ್ಯ ಭಟ್‌ ಅವರ ತೋಟದಲ್ಲಿ ಮತ್ತೆ ಕಾಡಾನೆಗಳು ಕಾಣಿಸಿಕೊಂಡಿವೆ.

ಅಂದಹಾಗೆ ಮೆಣಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೌಳಿಕುಂತೂರು, ಕಿಕ್ರೆ, ಶಿಡ್ಲೆ, ಕುಂಚೇಬೈಲು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಬಹಳ ಎಚ್ಚರದಿಂದಿರಲು ಅರಣ್ಯ ಇಲಾಖೆ ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments