Wednesday, September 16, 2026
Homeಗ್ರೇಟರ್ ಬೆಂಗಳೂರುHD Kumaraswamy Vs DKS: ಜೈಲಲ್ಲಿ ಇರುವವನಿಗೆ ಅಶ್ಲೀಲ ವೀಡಿಯೋ ಹೇಗೆ ಸಿಕ್ತು.?: ಡಿಕೆಶಿ ವಿರುದ್ಧ...

HD Kumaraswamy Vs DKS: ಜೈಲಲ್ಲಿ ಇರುವವನಿಗೆ ಅಶ್ಲೀಲ ವೀಡಿಯೋ ಹೇಗೆ ಸಿಕ್ತು.?: ಡಿಕೆಶಿ ವಿರುದ್ಧ HD ಕುಮಾರಸ್ವಾಮಿ ಕಿಡಿ!

Telegram Group
Join Now

ಜೈಲಿನಲ್ಲಿ  ಪ್ರಜ್ವಲ್ ರೇವಣ್ಣ ಫೋನ್​​​ ಬಳಸಿರುವ ಬಗ್ಗೆ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಇನ್ನು ಎಫ್‌ಎಸ್‌ಎಲ್ ವರದಿಯಲ್ಲೂ ಮಹತ್ವದ ವಿಚಾರಗಳು ಪತ್ತೆಯಾಗಿದೆ, ಎರಡು ವರ್ಷದಿಂದ ಪ್ರಜ್ವಲ್‌ ರೇವಣ್ಣ ಜೈಲಲ್ಲಿದ್ದಾನೆ. ಬಿಡದಿ, ಕೆಪಿಎಸ್‌ಸಿ ನೈಸ್ ವಿಷಯ ಬಂದಾಗ ಪರಪ್ಪನ ಅಗ್ರಹಾರದದಲ್ಲಿ ಪೋನ್ ಸಿಕ್ಕಿದೆ. ಈಗ ಹೊಸ ಕತೆ ಕಟ್ಟುತ್ತಿದ್ದಾರೆ ಎಂದು ಸಿಎಂ ಡಿ.ಕೆ ಶಿವಕುಮಾರ್‌ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಹೊಳೆನರಸೀಪುರ ತಾಲೂಕಿನ, ಮಾವಿನಕೆರೆಯಲ್ಲಿ ಅವರು ತಮ್ಮ ತಾಯಿ ಸಮಾಧಿಗೆ ನಮಿಸಿ, ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ನನ್ನ ಮನೆ ಅಲುಗಾಡಿಸಿರುವುದು ಯಾರು ಎಂದು ನಿಮಗೆ ಗೊತ್ತಿದೆ. ಒಂದು ಸಾಕ್ಷಿ ರೆಡಿ ಮಾಡಲು ಸಾಕಾಗಿದೆ ಎಂದು ಯಾರು ಹೇಳಿದ್ದು? ದೇವೇಗೌಡರ ಕುಟುಂಬ ಮುಗಿಸುತ್ತೇವೆ ಎಂದು ಯಾರು ಹೇಳಿದ್ದು? ಈ ಮುಖ್ಯಮಂತ್ರಿನೇ ತಾನೇ ಎಂದು ಕಿಡಿಕಾರಿದ್ದಾರೆ.

ದೇವೇಗೌಡರ ಕುಟುಂಬದವರ ಧ್ವನಿ ಅಡಗಿಸಲು ಈ ವಿಚಾರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!