Monday, August 4, 2025
!-- afp header code starts here -->
Homeರಾಜಕೀಯʼಕಮಲʼ ಮುಡಿದ ಸುಮಲತಾ‌‌ ಅಂಬರೀಶ್..!

ʼಕಮಲʼ ಮುಡಿದ ಸುಮಲತಾ‌‌ ಅಂಬರೀಶ್..!

ಪಕ್ಷೇತರವಾಗಿ ನಿಂತು ಗೆದ್ದ ಸುಮಲತಾ‌‌ ಅಂಬರೀಶ್ ಇದೀಗ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಕಳೆದ ವರ್ಷ ಬಿಜೆಪಿಗೆ ನನ್ನ ಬೆಂಬಲವಿರುತ್ತದೆ ಎಂದಿದ್ದರು ಆದರೆ ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಹಾಗೂ ಮಂಡ್ಯ ಬೆಂಬಲಿಗರ ಸಮ್ಮುಖದಲ್ಲಿ ಸುಮಲತಾ ಅಂಬರೀಶ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇನ್ನು ಈ ವೇಳೆ ಮಾತಾನಾಡಿದ ಸುಮಲತಾ‌‌ ಅಂಬರೀಶ್, ನನಗೆ ಸ್ವಾರ್ಥ ರಾಜಕಾರಣ ಮಾಡಲು ಇಷ್ಟವಿಲ್ಲ ಆದ್ದರಿಂದ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಪಕ್ಷದ ಒಳಿತಿಗಾಗಿ ಶ್ರಮಿಸುವುದು ನನ್ನ ಕರ್ತವ್ಯ ಎಂದರು.

ಸುಮಲತಾ ಪಕ್ಷ ಸೇರ್ಪಡೆಗೆ ‌‌ಪುತ್ರ ಅಭಿಷೇಕ್‌ ಅಂಬರೀಶ್‌, ಹಾಗೂ ರಾಕ್ ಲೈನ್‌ ವೆಂಕಟೇಶ್‌ ಸಾಥ್‌ ನೀಡಿದರು. ಇನ್ನು ಇದೇ ವೇಳೆ ಮಾಜಿ‌ ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್, ಮಾಜಿ ಕಾಂಗ್ರೆಸ್ ಮುಖಂಡ ಎಸ್ ಶಿವರಾಮೇಗೌಡ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು.

ಮೋದಿ ಸ್ಮರಿಸಿದ ಸುಮಲತಾ ಅಂಬರೀಷ್.!
ಬಿಜೆಪಿಗೆ ಸೇರ್ಪಡೆಯಾದ ಬಳಿಕ ತಾವು ಐತಿಹಾಸಿಕವಾಗಿ ಗೆದ್ದು ಮಂಡ್ಯ ಸಂಸದೆಯಾಗಿದ್ದನ್ನ ಈ ಸಂದರ್ಭದಲ್ಲಿ ಅವರು ಸ್ಮರಿಸಿದ್ರು. ಆ ವೇಳೆ ಅಂಬಿ ಅಭಿಮಾನಿಗಳು, ಮಂಡ್ಯದ ಜನರು, ಭಾರತೀಯ ಜನತಾ ಪಾರ್ಟಿ ಬಾಹ್ಯ ಬೆಂಬಲ ನೀಡಿದ್ದನ್ನ ನೆನಪಿಸಿಕೊಂಡರು. ಅಲ್ಲದೇ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಬಂದಿದ್ದಾಗ ನನಗೆ ಬೆಂಬಲ ನೀಡುವಂತೆ ಹೇಳಿದ್ದನ್ನ ಕೂಡ ಈ ವೇಳೆ ಸುಮಲತಾ ಅಂಬರೀಷ್ ಸ್ಮರಿಸಿದ್ರು. ಐದು ವರ್ಷಗಳ ಪಾರ್ಲಿಮೆಂಟ್ ಪಯಣದಲ್ಲಿ ಸಾಕಷ್ಟು ಕಲಿತಿದ್ದೇನೆ, ಅಂಬರೀಷ್ 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ರು. ಅವರ ರಾಜಕೀಯವನ್ನ ದೂರದಿಂದಲೇ ನೋಡಿಕೊಂಡು ಬಂದಿದ್ದೇನೆ ಎಂದರು. ನರೇಂದ್ರ ಮೋದಿಯವರ ಸ್ಪೂರ್ತಿ, ಪರಿಕಲ್ಪನೆ, ನಾಯಕತ್ವ, ಕನಸು ಎಲ್ಲವನ್ನೂ ನೋಡಿ ನನಗೆ ಅವರು ಪ್ರೇರಣೆಯಾದ್ರು. ಅವರ ಭಾಷಣವನ್ನ ಪಾರ್ಲಿಮೆಂಟಲ್ಲಿ ಕೇಳಿ ಹೊಸ ತಿಳುವಳಿಕೆ, ಸ್ಪೂರ್ತಿ ನನ್ನಲ್ಲಿ ಮೂಡಿತು. ಹಾಗಾಗಿಯೇ ನಾನು ಮುಂದೆ ಬಿಜೆಪಿ ಸೇರಬೇಕು ಎಂದು ತೀರ್ಮಾನಿಸಿದೆ ಅಂತಾ ಸುಮಲತಾ ಹೇಳಿದ್ರು.

ಬಿಜೆಪಿಗೆ ಕ್ರೆಡಿಟ್ ಸಲ್ಲಬೇಕು.!
ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನ ಮತ್ತೆ ಓಪನ್ ಮಾಡಿಸಬೇಕು ಅಂತಾ ಕೇಳಿಕೊಂಡಾಗ ಬಿ.ಎಸ್ ಯಡಿಯೂರಪ್ಪನವರು ನನಗೆ ಸಹಕಾರ ನೀಡಿದ್ರು. ಆ ಬಳಿಕ ಬಸವರಾಜ ಬೊಮ್ಮಾಯಿಯವರು ಕಾರ್ಖಾನೆಗೆ 50 ಕೋಟಿ ಅನುದಾನ ಕೊಟ್ಟು ದಶಕಗಳಿಂದ ಮುಚ್ಚಿದ ಕಾರ್ಖಾನೆ ಮತ್ತೆ ಪ್ರಾರಂಭ ಆಗುವಂತೆ ಮಾಡಿದ್ರು. ಆದ್ರೆ ಇವತ್ತು ಆ ಕಾರ್ಖಾನೆ ಉದ್ಘಾಟನೆಯಾದ್ರೂ ಬೇರೆಯವರು ಮತ್ತೆ ಮತ್ತೆ ಉದ್ಘಾಟನೆ ಮಾಡಲು ಹೊರಟಿರೋದು ಸರಿಯಿಲ್ಲ, ಆ ಕ್ರೆಡಿಟ್ ಬಿಜೆಪಿಗೆ ಸೇರಬೇಕು. ಎಲ್ಲದನ್ನ ಮಂಡ್ಯ ಜನ ನೋಡ್ತಾ ಇದ್ದಾರೆ, ಅಂತಾ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಮಾಧ್ಯಮವರಿಗೂ ಕೃತಜ್ಞತೆ ಸಲ್ಲಿಸಿದ ಸುಮಲತಾ.!
ನನ್ನ ಭವಿಷ್ಯದ ಬಗ್ಗೆ ನನಗೆ ಚಿಂತೆಯಿಲ್ಲ, ಆದರೆ ಮಂಡ್ಯದ ಜನರ ಭವಿಷ್ಯ, ರಾಜ್ಯ-ದೇಶದ ಭವಿಷ್ಯವನ್ನ ಗಮನದಲ್ಲಿಟ್ಟುಕೊಂಡು ತುಂಬಾ ಸಂತೋಷದಿಂದ ಬಿಜೆಪಿ ಸೇರುತ್ತಿದ್ದೇನೆ ಅಂತಾ ಇದೇ ವೇಳೆ ಸುಮಲತಾ ಹೇಳಿದ್ರು. ಹಾಗೆಯೇ ಈ ಐದು ವರ್ಷ, ಮಾಧ್ಯಮದವರು ನನಗೆ ಸಾಕಷ್ಟು ಮೀಡಿಯಾ ಸ್ಪೆಸ್ ಕೊಟ್ಟಿದ್ದಾರೆ ಅವರಿಗೆ ಕೃತಜ್ಞತೆ ಹೇಳ್ತೇನೆ ಅಂತಾ ಸುಮಲತಾ ಹೇಳಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!