Friday, July 17, 2026
Homeಸ್ಪೋರ್ಟ್ಸ್IPL 2026: RCB vs GT ಫೈನಲ್‌ ಫೈಟ್: ಈ ಸಲ ಕಪ್‌ ಯಾರಿಗೆ?

IPL 2026: RCB vs GT ಫೈನಲ್‌ ಫೈಟ್: ಈ ಸಲ ಕಪ್‌ ಯಾರಿಗೆ?

Telegram Group
Join Now

ಕಳೆದ ಎರಡು ತಿಂಗಳಿಂದ ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ಒದಗಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು ಫೈನಲ್‌ ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಿದ್ಧಗೊಂಡಿದೆ.

ಪಂದ್ಯ ಎಲ್ಲಿ – ಯಾವಾಗ?
ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
ಸಮಯ: ಸಂಜೆ 7.30
ನೇರಪ್ರಸಾರ; ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸ್ಪೋರ್ಟ್ಸ್

ಮೇ 31ರ ಭಾನುವಾರ (ಇಂದು) ಸಂಜೆ 7:30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಆತಿಥೇಯ ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿವೆ. ಪ್ರಸಕ್ತ ಸೀಸನ್‌ನ ಟ್ರೆಂಡ್ ಗಮನಿಸಿದರೆ ಇದೊಂದು ಹೈ-ಸ್ಕೋರಿಂಗ್ ಪಂದ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ವಾಲಿಫೈಯರ್ 1ರಲ್ಲಿ ಆರ್‌ಸಿಬಿ ವಿರುದ್ಧ ಪರಾಭವಗೊಂಡು ನಿರಾಸೆ ಅನುಭವಿಸಿದರೂ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ಮಣಿಸಿ ಫೈನಲ್ ಗೆ ಜಿಗಿದಿರುವ ಶುಭಮನ್ ಗಿಲ್ ಪಡೆಗೆ ಈ ಬಾರಿ ತವರು ಮೈದಾನದಲ್ಲಿ ಆಡುವ ಲಾಭ ಸಿಗಲಿದೆ. ಇದೇ ಮೈದಾನದಲ್ಲಿ ಆರ್‌ಸಿಬಿ ವಿರುದ್ಧ ಲೀಗ್‌ನಲ್ಲಿ ಜಿಟಿ 4 ವಿಕೆಟ್‌ಗಳ ಜಯ ಸಾಧಿಸಿತ್ತು. ಹೀಗಾಗಿ ಟೈಟಾನ್ಸ್ ಅತೀವ ಆತ್ಮವಿಶ್ವಾಸದಲ್ಲಿದೆ. ಆದರೆ ಕಳೆದ 2 ಸೀಸನ್ ಗಳಿಂದ ಪಂದ್ಯದಿಂದ ಪಂದ್ಯಕ್ಕೆ ಬಲಾಢ್ಯವಾಗಿ ಕಾಣಿಸುತ್ತಿರುವ ಆರ್‌ಸಿಬಿ ಬ್ಯಾಕ್-ಟು-ಬ್ಯಾಕ್ ಕಪ್ ಗೆಲ್ಲುವ ತವಕದಲ್ಲಿದೆ. ಇತ್ತಂಡಗಳು ಈವರೆಗೆ ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು 5 ಬಾರಿ ಆರ್‌ಸಿಬಿ ಮತ್ತು 4 ಬಾರಿ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿವೆ.

ಗಿಲ್‌-ಸುದರ್ಶನ್‌ ನಿಂತರೇ ಆರ್‌ಸಿಬಿಗೆ ಸಂಕಷ್ಟ
ಗುಜರಾತ್ ತಂಡದ ಅಗ್ರಕ್ರಮಾಂಕದ ಬ್ಯಾಟರ್ ಗಳಾದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅವರು ಭರ್ಜರಿ ಫಾರ್ಮ್ ನಲ್ಲಿದ್ದು ಕ್ವಾಲಿಫೈಯರ್ 2 ಪಂದ್ಯದಲ್ಲಿ ಅವರಾಡಿದ ಇನ್ನಿಂಗ್ಸೇ ಇದಕ್ಕೆ ಸಾಕ್ಷಿ. ಜೊತೆಗೆ ಜಾಸ್ ಬಟ್ಲರ್ ಸಹ ಚೆನ್ನಾಗಿ ಆಡುತ್ತಿದ್ದಾರೆ. ಈ ಮೂವರು ವಿಕೆಟ್ ಗಳನ್ನು ಆರ್‌ಸಿಬಿ ತಂಡ ಬೇಗನೇ ಪಡೆಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments