ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ 2026ರ ಟಿ20 ವಿಶ್ವಕಪ್ಗಾಗಿ ಬಿಸಿಸಿಐ (BCCI) ಭಾರತ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ಈ ಬಲಿಷ್ಠ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಆಲ್ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಈ ಬಾರಿ ಶುಭ್ಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಚೆರ್ಚೆಯ ವಿಷಯವಾಗಿದೆ.
ಭಾರತ ತಂಡದ ಅಧಿಕೃತ ಸ್ಕ್ವಾಡ್:
ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
ಟೀಮ್ ಇಂಡಿಯಾದ ಪಂದ್ಯಗಳ ವೇಳಾಪಟ್ಟಿ
- ಫೆಬ್ರವರಿ 7: ಭಾರತ vs ಯುಎಸ್ಎ (ಮುಂಬೈ)
- ಫೆಬ್ರವರಿ 12: ಭಾರತ vs ನಮೀಬಿಯಾ (ದೆಹಲಿ)
- ಫೆಬ್ರವರಿ 15: ಭಾರತ vs ಪಾಕಿಸ್ತಾನ್ (ಕೊಲಂಬೊ, ಆರ್. ಪ್ರೇಮದಾಸ ಸ್ಟೇಡಿಯಂ)
- ಫೆಬ್ರವರಿ 18: ಭಾರತ vs ನೆದರ್ಲೆಂಡ್ಸ್ (ಅಹಮದಾಬಾದ್)
ಟೂರ್ನಿಯ ಸ್ವರೂಪ (Tournament Format):
- ಸೂಪರ್-8 ಹಂತ: ಮೊದಲ ಹಂತದ 4 ಗ್ರೂಪ್ಗಳಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೂಪರ್-8 ರ ಹಂತಕ್ಕೆ ಅರ್ಹತೆ ಪಡೆಯುತ್ತವೆ.
- ಸೆಮಿಫೈನಲ್: ಸೂಪರ್-8 ಹಂತದಲ್ಲಿ ಅಂಕಪಟ್ಟಿಯ ಟಾಪ್-4 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತವೆ.
ಟಿ20 ವಿಶ್ವಕಪ್ 2026: ನಾಲ್ಕು ಗ್ರೂಪ್ಗಳ ವಿವರ
ಈ ಬಾರಿ ಒಟ್ಟು 20 ತಂಡಗಳು ಪಾಲ್ಗೊಳ್ಳುತ್ತಿದ್ದು, ಅವುಗಳನ್ನು 4 ಗ್ರೂಪ್ಗಳಾಗಿ ವಿಂಗಡಿಸಲಾಗಿದೆ:
| ಗ್ರೂಪ್-1 | ಗ್ರೂಪ್-2 | ಗ್ರೂಪ್-3 | ಗ್ರೂಪ್-4 |
| ಭಾರತ | ಆಸ್ಟ್ರೇಲಿಯಾ | ಇಂಗ್ಲೆಂಡ್ | ಸೌತ್ ಆಫ್ರಿಕಾ |
| ಪಾಕಿಸ್ತಾನ್ | ಶ್ರೀಲಂಕಾ | ವೆಸ್ಟ್ ಇಂಡೀಸ್ | ನ್ಯೂಝಿಲೆಂಡ್ |
| ಯುಎಸ್ಎ | ಝಿಂಬಾಬ್ವೆ | ಇಟಲಿ | ಅಫ್ಘಾನಿಸ್ತಾನ್ |
| ನಮೀಬಿಯಾ | ಐರ್ಲೆಂಡ್ | ಬಾಂಗ್ಲಾದೇಶ್ | ಯುಎಇ |
| ನೆದರ್ಲೆಂಡ್ಸ್ | ಒಮಾನ್ | ನೇಪಾಳ | ಕೆನಡಾ |
ಬಿಸಿಸಿಐ ಯುವ ಆಟಗಾರರಿಗೆ ಈ ಬಾರಿ ಅವಕಾಶ ನೀಡಲಾಗಿದ್ದು, ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರಂತಹ ಸ್ಫೋಟಕ ಬ್ಯಾಟರ್ಗಳಿಗೆ ಮನ್ನಣೆ ನೀಡಿದೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗಕ್ಕೆ ಸಾಥ್ ನೀಡಲು ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಅವರ ‘ಮಿಸ್ಟರಿ’ ಬೌಲಿಂಗ್ ತಂಡದ ಬಲ ಹೆಚ್ಚಿಸಿದೆ. ಇನ್ನು, ಇತ್ತೀಚಿನ ಟಿ20 ಸರಣಿಗಳಲ್ಲಿನ ಸ್ಟ್ರೈಕ್ ರೇಟ್ ಸಮಸ್ಯೆಯಿಂದಾಗಿ ಶುಭ್ಮನ್ ಗಿಲ್ ಸ್ಥಾನ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
