Sunday, July 5, 2026
Homeಇತರೆಹೋಟೆಲ್ ಸ್ಟೈಲ್ ಗರಿಗರಿ 'ಆಲೂ 65' ಮನೆಯಲ್ಲೇ ಟ್ರೈ ಮಾಡಿ!

ಹೋಟೆಲ್ ಸ್ಟೈಲ್ ಗರಿಗರಿ ‘ಆಲೂ 65’ ಮನೆಯಲ್ಲೇ ಟ್ರೈ ಮಾಡಿ!

Telegram Group
Join Now

ಸಂಜೆ ಟೈಮ್ ವೆಜ್ ಸ್ನ್ಯಾಕ್ಸ್ ಬೇಕು ಅಂದರೆ ಆಲೂ 65 ಬೆಸ್ಟ್ ಆಪ್ಶನ್. ಚಿಕನ್ 65ಗೆ ಪೈಪೋಟಿ ನೀಡುವ ಈ ಆಲೂ 65 ಎಲ್ಲ ವಯಸ್ಸಿನವರು ಇಷ್ಟವಾಗುವ ಅದ್ಭುತ ರುಚಿ. ಆಲೂ 65 ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ: 4 ರಿಂದ 5 ಮಧ್ಯಮ ಗಾತ್ರದ್ದು

ಹಿಟ್ಟು: 3 ದೊಡ್ಡ ಚಮಚ ಗೋಧಿ ಹಿಟ್ಟು (ಅಥವಾ ಮೈದಾ)

ಕಾರ್ನ್‌ಫ್ಲೋರ್: 3 ದೊಡ್ಡ ಚಮಚ (ಗರಿಗರಿತನಕ್ಕಾಗಿ)

ಕರಿಬೇವು: 7 ರಿಂದ 8 ಎಲೆಗಳು (ಸಣ್ಣಗೆ ಹೆಚ್ಚಿದ್ದು)

ಅಚ್ಚಖಾರದ ಪುಡಿ: 1 ಚಮಚ

ಧನಿಯಾ ಪುಡಿ: ಅರ್ಧ ಚಮಚ

ಜೀರಿಗೆ ಪುಡಿ: ಅರ್ಧ ಚಮಚ

ಕಾಳುಮೆಣಸಿನ ಪುಡಿ: ಅರ್ಧ ಚಮಚ

ಗರಂ ಮಸಾಲಾ: ಅರ್ಧ ಚಮಚ

ಶುಂಠಿ-ಬೆಳ್ಳುಳ್ಳಿ ಪೇಸ್ಟ್: 2 ರಿಂದ 3 ಚಮಚ

ಲಿಂಬೆರಸ: 1 ದೊಡ್ಡ ಚಮಚ

ಉಪ್ಪು: ರುಚಿಗೆ ತಕ್ಕಷ್ಟು

ಎಣ್ಣೆ: ಕರಿಯಲು ಬೇಕಾದಷ್ಟು


ತಯಾರಿಸುವ ಸರಳ ವಿಧಾನ

ಆಲೂಗಡ್ಡೆ ಬೇಯಿಸಿಕೊಳ್ಳಿ: ಮೊದಲು ಆಲೂಗಡ್ಡೆಗಳನ್ನು ಕುಕ್ಕರ್‌ನಲ್ಲಿ ಕೇವಲ ಒಂದು ವಿಷಲ್ ಬರುವವರೆಗೆ ಬೇಯಿಸಿ. ಅವು ಪೂರ್ತಿಯಾಗಿ ಬೇಯದೆ ಸ್ವಲ್ಪ ಗಟ್ಟಿಯಾಗಿಯೇ ಇರಬೇಕು (ಸುಮಾರು ಶೇ. 30ರಷ್ಟು ಮಾತ್ರ ಬೆಂದಿರಲಿ). ನಂತರ ಸಿಪ್ಪೆ ತೆಗೆದು ಸಮನಾದ ಚೌಕಾಕಾರದ ತುಂಡುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಿ.

ಮಸಾಲೆಯ ತಯಾರಿಸಿಕೊಳ್ಳಿ : ಒಂದು ಅಗಲವಾದ ಬೌಲ್ ತೆಗೆದುಕೊಂಡು ಅದಕ್ಕೆ ತಲಾ 3 ದೊಡ್ಡ ಚಮಚ ಗೋಧಿ ಹಿಟ್ಟು ಮತ್ತು ಕಾರ್ನ್‌ಫ್ಲೋರ್ ಹಾಕಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅಚ್ಚಖಾರದ ಪುಡಿ, ತಲಾ ಅರ್ಧ ಚಮಚದಷ್ಟು ಧನಿಯಾ ಪುಡಿ, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಹಾಗೂ ಗರಂ ಮಸಾಲಾ ಪುಡಿಯನ್ನು ಸೇರಿಸಿ. ಇದರೊಂದಿಗೆ ಉತ್ತಮ ಪರಿಮಳ ಮತ್ತು ರುಚಿಗಾಗಿ 2 ರಿಂದ 3 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಸಣ್ಣಗೆ ಹೆಚ್ಚಿದ ಕರಿಬೇವು ಮತ್ತು 1 ಚಮಚ ಲಿಂಬೆರಸವನ್ನು ಸೇರಿಸಿಕೊಳ್ಳಿ. ಇವೆಲ್ಲವನ್ನೂ ಮೊದಲು ಚೆನ್ನಾಗಿ ಬೆರೆಸಿ, ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಗಂಟಿಲ್ಲದಂತೆ ಮಂದವಾದ ಮಸಾಲೆ ತಯಾರಿಸಿಕೊಳ್ಳಿ. ಈ ಮಿಶ್ರಣವು ತುಂಬಾ ತೆಳುವಾಗಿರದೆ, ಆಲೂಗಡ್ಡೆ ತುಂಡುಗಳ ಮೇಲೆ ಮಸಾಲೆಯು ಒಂದು ಪದರದಂತೆ ಸರಿಯಾಗಿ ಅಂಟಿಕೊಳ್ಳುವಷ್ಟು ದಪ್ಪವಾಗಿರಲಿ.

ಗರಿಗರಿಯಾಗಿ ಫ್ರೈ ಮಾಡಿ: ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಮಸಾಲೆ ಹಚ್ಚಿದ ಆಲೂಗಡ್ಡೆಗಳನ್ನು ಒಂದೊಂದಾಗಿ ಹಾಕಿ. ಒಂದೇ ಬಾರಿಗೆ ಅತಿಯಾಗಿ ಹಾಕಬೇಡಿ, ಇದರಿಂದ ಎಣ್ಣೆಯ ತಾಪಮಾನ ಕಡಿಮೆಯಾಗಿ ಆಲೂಗಡ್ಡೆಗಳು ಮೆತ್ತಗಾಗಬಹುದು. ಅವು ಹೊಂಬಣ್ಣಕ್ಕೆ ಬಂದು ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ.

ರುಚಿ ಹೆಚ್ಚಿಸಲು ಟಿಪ್ಸ್

ಆಲೂ 65 ಅನ್ನು ಬಿಸಿಬಿಸಿಯಾಗಿ ಸವಿಯಿರಿ, ಆಗಲೇ ಅದರ ಅಸಲಿ ರುಚಿ ಮತ್ತು ಗರಿಗರಿತನ ಅನುಭವಿಸಲು ಸಾಧ್ಯ. ಇದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ, ಪುದೀನಾ ಚಟ್ನಿ ಅಥವಾ ಸಾಸ್ ಜೊತೆ ಸವಿಯಲು ನೀಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments