ಮೂಡಿಗೆರೆ:
ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮ ದಿನದ ಅಂಗವಾಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲಾ ತಾಣದ ಜಿಲ್ಲಾಧ್ಯಕ್ಷ ಶಿವ ಸಾಗರ್ ತೇಜಸ್ವಿ ಅವರು ಶುಕ್ರವಾರ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸಹಿ ಹಂಚುವ ಜತೆಗೆ ೪ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ರಾö್ಯಕ್ಸೂಟ್ ಅಪ್ಪರ್ ವಿತರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂಗೆ ಮಾತನಾಡಿದ ಅವರು, ಪ್ರಿಕಾಂಕ್ ಖರ್ಗೆ ಅವರು ಸರಳ ಸಜ್ಜನ ರಾಜಕಾರಣ ಯಾಗಿದ್ದಾರೆ. ಅವರ ತಮ್ಮ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಇಷ್ಟಪಡುವುದಿಲ್ಲ. ತನ್ನ ಜನ್ಮ ದಿನಾಚರಣೆ ಆಚರಿಸಲಿಚ್ಚಿಸುವವರು ಜನಪರ ಹಾಗೂ ಸಮಾಜಮುಖ ಕೆಲಸ ಮಾಡುವ ಜತೆಗೆ ಬಡ ವಿದ್ಯಾರ್ಥಿಗಳ ಸಮಸ್ಯೆಗೆ ನೆರವಾದರೆ ಅದಕ್ಕಿಂತ ದೊಡ್ಡ ಉಡುಗೊರೆ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಮಲೆನಾಡಿನಲ್ಲಿ ಚಳಿ ಅಧಿಕವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಟ್ರಾö್ಯಕ್ಸೂಟ್ ಅಪ್ಪರ್ ವಿತರಿಸಲಾಗಿದೆ ಎಂದು ಹೇಳಿದರು.

ಶಾಲೆ ಮುಖ್ಯೋಪಾಧ್ಯಾಯ ರಾಜೇಶ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
