Sunday, August 9, 2026
Homeಇತರೆಜಿ ಕೆ ಮಂಜಪ್ಪಯ್ಯನವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ

ಜಿ ಕೆ ಮಂಜಪ್ಪಯ್ಯನವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ

Telegram Group
Join Now

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕಳಸ ಕೃಷಿಪತ್ತಿನ ಸಹಕಾರ ಸಂಘ ಕಳಸದ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಜಿ ಕೆ ಮಂಜಪ್ಪಯ್ಯನವರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡಲಿರುವ ಅವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನೀಡುವ ಈ ಪ್ರಶಸ್ತಿಗೆ ಈ ಬಾರಿ 72 ಜನರು ಆಯ್ಕೆ ಆಗಿದ್ದು ಚಿಕ್ಕಮಗಳೂರು ಜಿಲ್ಲೆಯಿಂದ ಮಂಜಪ್ಪಯ್ಯ ಸಹಿತ ಇಬ್ಬರು ಆಯ್ಕೆ ಆಗಿದ್ದಾರೆ,


ಕರ್ನಾಟಕ ರಾಜ್ಯ ಸಹಕಾರ ಚಳವಳಿಯ ಬೆಳವಣಿಗೆಗೆ ಜಿ ಕೆ ಮಂಜಪ್ಪಯ್ಯ ಸಲ್ಲಿಸಿರುವ ಕೊಡುಗೆ ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಹಕಾರ ಮಹಾ ಮಂಡಳಿಯವರು ತಿಳಿಸಿದರು. ಬಾಗಲಕೋಟೆಯಲ್ಲಿ ನಡೆಯಲಿರುವ ಅಖಿಲ ಭಾರತ 71ನೇ ಸಹಕಾರ ಸಪ್ತಾಹದ ಸಮಾರಂಭದಲ್ಲಿ ಜಿ.ಕೆ.ಮಂಜಪ್ಪಯ್ಯನವರು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments