Friday, March 27, 2026
Homeಜಿಲ್ಲಾಸುದ್ದಿಅಜ್ಜಂಪುರ: ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟದಲ್ಲಿ ಕಣ್ಣೀರು ಸುರಿಸಿದ ರೈತರು

ಅಜ್ಜಂಪುರ: ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟದಲ್ಲಿ ಕಣ್ಣೀರು ಸುರಿಸಿದ ರೈತರು

ಚಿಕ್ಕಮಗಳೂರು: ಜಿಲ್ಲೆಯ ವಾಣಿಜ್ಯ ಬೆಳೆಯಲ್ಲಿ ಈರುಳ್ಳಿ ಕೂಡ ಪ್ರಮುಖವಾಗಿದೆ. ಈರುಳ್ಳಿ ಒಂದು ವರ್ಷ ರೈತರಿಗೆ ಬಂಪರ್ ಬೆಲೆ ತರುತ್ತದೆ ಇನ್ನೂ ವರ್ಷ ರೈತರು ಸಂಕಷ್ಟದಲ್ಲಿ ಕಣ್ಣೀರು ಸುರುಸುವಂತೆ ಮಾಡುತ್ತದೆ.

ಈ ಬಾರಿ ಒಳ್ಳೆಯ ಬೆಳೆ ಬಂದಿದೆ ಆದರೆ ಬೆಲೆ ಪಾತಾಳದಲ್ಲಿದೆ ಹೀಗಾಗಿ ರೈತರು ಗೋಳಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಮತ್ತು ಅಜ್ಜಂಪುರ ತಾಲ್ಲೂಕಿನಲ್ಲಿ ಒಟ್ಟು 8000 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10, ರಿಂದ14 ಟನ್ ಬೆಳೆ ಬಂದಿದೆ ಎನ್ನುವ ತೋಟಗಾರಿಕೆ ಇಲಾಖೆ ಯವರ ಲೆಕ್ಕ ,ಉತ್ತಮ ಬೆಳೆ ಬಂದಿದೆ ಆದರೆ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ರೈತರು ತಲೆಯ ಮೇಲೆ ಕೈಯಿಟ್ಟು ಕೊಂಡು ಕಣ್ಣೀರು ಸುರಿಸುತ್ತಾ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಒಂದು ಕ್ವಿಂಟಾಲ್ ಗೆ ಕೇವಲ ಇನ್ನೂರರಿಂದ ಮೂನ್ನುರು ರೂಪಾಯಿ ಬೆಲೆ ಇದೆ ಇದು ಬರೀ ಕೂಲಿ ಕೆಲಸದವರಿಗೆ ಮಾತ್ರ ಆಗುತ್ತದೆ ಸಾಗಣೆಯ ವೆಚ್ಚ ಕೈಯಿಂದ ಕೊಡಬೇಕು ಜೊತೆಗೆ ಬೀಜ,ಗೊಬ್ಬರ, ಔಷಧಿ ಮತ್ತು ಕಳೆ ಕೀಳುವುದು ಸೇರಿದರೆ ರೈತರು ಸಾವಿನ ದವಡೆಗೆ ಸಿಲುಕುವುದು ಖಚಿತ.

ರೈತರ ಬೆಳೆಗೆ 1300,ರಿಂದ1500 ರೂಗಳ ಸಿಕ್ಕರೆ ಬೆಳೆ ಬೆಳೆಯಬಹುದು ಇಲ್ಲದಿದ್ದರೆ ಗೋಣಿ ಚೀಲ ಮಾತ್ರ ಉಳಿಯುತ್ತವೆ. ರೈತ ಮುಖಂಡ ಚನ್ನಬಸಪ್ಪ ರೈತರ ಕಷ್ಟ ಕೇಳುವವರು ಯಾರೂ ಇಲ್ಲ ಜನಪ್ರತಿನಿಧಿಗಳು ಸತ್ತು ಹೋಗಿದ್ದಾರೆ .ಅವ್ವ,ಮಗಳು ಬಂದು ನಾಟಕ ಮಾಡುತ್ತಾರೆ. ಎಂ,ಎಲ್,ಎ ಎಂಬ ಅಸಾಮಿ ನಾಪತ್ತೆಯಾಗಿದ್ದಾರೆ ವಿರೋಧ ಪಕ್ಷ ಮಾಜಿ ಎಂ,ಎಲ್,ಎ ಗಳು ತೋಟದ ಮನೆಯಲ್ಲಿ ತಟ್ಟುತ್ತಾ ಕುಳಿತಿದ್ದಾರೆ ಎಂದು ಛೇಡಿಸುತ್ತಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆದಿದ್ದಾರೆ.ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಹೆಚ್ಚಿನ ಬೆಳೆ ಬಂದಿರುವುದು ಬೆಲೆ ಕುಸಿತವಾಗಿದೆ ಎಂದು ಸಂಬಂಧಿಸಿದ ಇಲಾಖೆಯವರು ಹೇಳುತ್ತಾರೆ. ವರ್ಷವೂ ಕಷ್ಟ ಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲ ಎಂದು ಕಷ್ಟ ಹೇಳಲು ಹೋದರೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಬರೀ ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಾರೆ. ಮುಂದೆ ಈರುಳ್ಳಿ ಬೆಳೆಯುವುದಿಲ್ಲ ಎಂದು ಕೊಂಡರು ಆಸೆ ಎಂಬ ಬೆನ್ನು ಹತ್ತಿ ಮತ್ತೆ ಮತ್ತೆ ಈರುಳ್ಳಿ ಬೆಳೆಯಲು ಮುಂದಾಗಿ ಕೈ ಸುಟ್ಟು ಕೊಳ್ಳುತ್ತಾನೆ.

ಅಜ್ಜಂಪುರ ತಾಲ್ಲೂಕಿನ ಶಿವನಿ,ಚೀರನಹಳ್ಳಿ,ಕಣಗಬಟ್ಟೆ,ಬಂಡ್ರೆ,ಗಡಿಹಳ್ಳಿ,ತಡಗ,ನಾರಣಾಪುರ,ಭಂಕನ ಕಟ್ಟೆ,ಸೊಲ್ಲಾಪುರ ಸುತ್ತಾ ,ಮುತ್ತಾ ಹಾಗೂ ಕಡೂರು ತಾಲ್ಲೂಕಿನ ಚೌಳಹಿರಿಯೂರು ಹಿರೇನಲ್ಲೂರು,ಗಿರಿಯಾಪುರ,ಬಾಸೂರು,ಬಿಸೆಲೆರೆ ಸುತ್ತ ಮುತ್ತಲಿನ ರೈತರಜ ಬಳಲಿ ಬೆಂಡಾಗಿದ್ದಾರೆ.

ಅದಾಯಕ್ಕಿಂತ ಖರ್ಚು ಹೆಚ್ಚು ಬಂದರೆ ರೈತ ಬದುಕುವುದು ಹೇಗೆ ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳು ಉತ್ತರಿಸುವ ಬದಲು ನಾನು ನನ್ನ ಕುಟುಂಬ ಎಂದು ಬಾರ್,ಕ್ರೇಷರ್,ರಿಯಲ್ ಎಸ್ಟೇಟ್ ಧಂದೆಯ ಮುಂದೆ ಯಾರೂ ಯಾವುದು ಮುಖ್ಯವಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!