Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಗೋಣಿಬೀಡು ಲಯನ್ಸ್ ಸಂಸ್ಥೆ ವತಿಯಿಂದ ಆಹಾರ ಕಿಟ್ & ಸಸಿ ನೆಡುವ ಕಾರ್ಯಕ್ರಮ!

ಮೂಡಿಗೆರೆ: ಗೋಣಿಬೀಡು ಲಯನ್ಸ್ ಸಂಸ್ಥೆ ವತಿಯಿಂದ ಆಹಾರ ಕಿಟ್ & ಸಸಿ ನೆಡುವ ಕಾರ್ಯಕ್ರಮ!

ಮೂಡಿಗೆರೆ: ಗೋಣಿಬೀಡು ಲಯನ್ಸ್ ಸಂಸ್ಥೆ ವತಿಯಿಂದ ಸಸಿ ನೆಡುವ ಮತ್ತು ಆಹಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ತಾಲೂಕಿನ ಮರಬೈಲ್ ಗ್ರಾಮದಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಲಯನ್ಸ್ ಸಂಸ್ಥೆ ಅಧ್ಯಕ್ಷ ನವೀನ್, ಸಮಾಜಸೇವೆಯ ಜತೆಗೆ ಸುತ್ತಲಿನ ‌ಪರಿಸರವನ್ನು ಸ್ವಚ್ಛವಾಗಿಸಿ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವಂತೆ ಗಿಡನೆಟ್ಟು, ನೀರುಣಿಸಿ ಪೋಷಿಸುವ ಕಾರ್ಯ ಬದುಕಿಗೆ ನೆಮ್ಮದಿ‌ ನೀಡುತ್ತದೆ ಎಂದರು

‘ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಯ ಜೊತೆಯಲ್ಲಿ ರೈತರ ಜಮೀನು ಹಾಗೂ ಸರ್ಕಾರಿ ಭೂಮಿಯಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಮುಂದಿನ ಪೀಳಿಗೆಯ ಉಳಿವಿಗೆ ಕೈ ಜೋಡಿಸಿದಂತಾಗುತ್ತದೆ. ಮನುಕುಲಕ್ಕೆ ಅತ್ಯವಶ್ಯವಾಗಿರುವ ಗಾಳಿ ಮತ್ತು ನೀರನ್ನು ಉಳಿಸಿ ಸ್ವಚ್ಛವಾಗಿಸುವ ಪ್ರಯತ್ನ ನಿಜಕ್ಕೂ ಉತ್ತಮವಾಗಿದೆ ಎಂದು ಅವರು ತಿಳಿಸಿದರು.

ಹಾಗೆ ಲಯನ್ಸ್ ಸಂಸ್ಥೆ ಉಪಾಧ್ಯಕ್ಷ ಹರೀಶ್ ಮಾತನಾಡಿ, ಸಾರ್ವಜನಿಕರ ಜೊತೆಗೆ ವಿವಿಧ ಸಂಘ–ಸಂಸ್ಥೆಗಳು ‌ಸೇರಿ ಗಿಡ ನೆಟ್ಟು ಪೋಷಿಸುವ ಕಾರ್ಯ ನಡೆದಲ್ಲಿ ಎಲ್ಲೆಡೆ ಉತ್ತಮವಾದ ಪರಿಸರವನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ವಿವಿಧ ಸಮಾಜಮುಖಿ‌ ಕಾರ್ಯಗಳ ಜತೆಗೆ ಈ ಬಾರಿ ಪರಿಸರ ಸಂರಕ್ಷಣೆಗಾಗಿ ಕೈಗೊಂಡ ಕಾರ್ಯಕ್ಕೆ ವಿವಿಧ ವಲಯಗಳ ಪದಾಧಿಕಾರಿಗಳು ನೀಡಿದ ಸಹಕಾರ ಶ್ಲಾಘನೀಯ ಎಂದು ಹೇಳಿದರು.

ಇದೇ ವೇಳೆ ಗೋಣಿಬೀಡು ಸುತ್ತಮುತ್ತ ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ ಸಂಸ್ಥೆ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಸಂದೀಪ್ ಮರಬೈಲ್, ವಿಶ್ವಾಸ್ ಗೌಡ, ಮಹೇಶ್ ಸಾಲುಮರ, ಸುನಿತಾ ಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಮುಖ್ಯ ಅಧಿಕಾರಿ ಸಿಂಚನ ಗೌಡ, ಗ್ರಾ.ಪಂ.ಸದಸ್ಯರಾದ ಪ್ರಹ್ಲಾದ್, ವಿಜೇಂದ್ರ, ಸೇರಿದಂತೆ ಮರಬೈಲ್ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ :ಪುನೀತ್ ಕಡಿದಾಳ್ 
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!