Sunday, June 28, 2026
Homeಜಿಲ್ಲಾಸುದ್ದಿಎನ್‌ ಆರ್‌ ಪುರ: ರಸ್ತೆ ಗುಂಡಿಗಳಿಗೆ ಬೇಸತ್ತು ತಾವೇ ಗುಂಡಿ ಮುಚ್ಚಿದ ಗ್ರಾಮಸ್ಥರು!

ಎನ್‌ ಆರ್‌ ಪುರ: ರಸ್ತೆ ಗುಂಡಿಗಳಿಗೆ ಬೇಸತ್ತು ತಾವೇ ಗುಂಡಿ ಮುಚ್ಚಿದ ಗ್ರಾಮಸ್ಥರು!

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ರಸ್ತೆ ಗುಂಡಿಮಯವಾಗಿದೆ. ರಸ್ತೆಯಲ್ಲಿ ಸಂಚರಿಸಲಾಗದೆ ಬೇಸತ್ತ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಡಬೂರಿನ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸ ಕೈಗೊಂಡಿದ್ದಾರೆ.

ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಸ್ಥಳೀಯರು ಮತ್ತು ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರು “ಗುಂಡಿ ಮುಚ್ಚಲು 19 ಕೋಟಿ ರೂ. ಬಂದಿದೆ” ಎಂದು ಹೇಳುತ್ತಿದ್ದರೂ, ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರು ತಮ್ಮ ಸ್ವಂತ ಹಣ ಖರ್ಚುಮಾಡಿ ಗುಂಡಿಗಳನ್ನು ಮುಚ್ಚುತ್ತಿರುವುದು ಶಾಸಕರ ಮತ್ತು ಸರ್ಕಾರದ ವೈಫಲ್ಯವನ್ನು ತೋರಿಸುತ್ತೆ.

ಯುವ ಕಾಂಗ್ರೆಸ್ ಕೊಪ್ಪ ದವರೇ ಇದೇನ ನಿಮ್ ಅಭಿವೃದ್ಧಿ? ಪರಿಸ್ಥಿತಿ ಹೀಗಿರುವಾಗ ಯಾಕೆ ಬೇಕು ಶಾಸಕರು ಮತ್ತು ಸರ್ಕಾರ? ಅಲ್ವಾ? ಎಂದು ಶಾಸಕರ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments