Saturday, August 15, 2026
Homeಜಿಲ್ಲಾಸುದ್ದಿಹಾಸನ: ನಾಲ್ವರು ಪೌರಕಾರ್ಮಿಕರಿಗೆ ಸಂಸದರಿಂದ ಹೆಲಿಕಾಪ್ಟರ್‌ ಪ್ರವಾಸ ಭಾಗ್ಯ

ಹಾಸನ: ನಾಲ್ವರು ಪೌರಕಾರ್ಮಿಕರಿಗೆ ಸಂಸದರಿಂದ ಹೆಲಿಕಾಪ್ಟರ್‌ ಪ್ರವಾಸ ಭಾಗ್ಯ

Telegram Group
Join Now

ಹಾಸನ: ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಪ್ರವಾಸದಲ್ಲಿ, ನಗರದ ಸ್ವಚ್ಛತೆಗೆ ದಿನರಾತ್ರಿ ಶ್ರಮಿಸುತ್ತಿರುವ ಮಹಾನಗರ ಪಾಲಿಕೆ ಪೌರ ಕಾರ್ಮಿಕರನ್ನು ಸಂಸದ ಶ್ರೇಯಸ್ ಪಟೇಲ್ ಪರಿಗಣಿಸಿದ್ದಾರೆ.


ನಗರದ ಹೊಳಪಿನ ಹಿಂದೆ ಶ್ರಮಿಸುವ ಈ ಮೌನ ಯೋಧರ ಸೇವೆಗೆ ಕೃತಜ್ಞತೆಯ ಸೂಚಕವಾಗಿ, ಸಂಸದರು ಹೆಲಿಕಾಪ್ಟರ್ ಪ್ರವಾಸದ ಅವಕಾಶವನ್ನು ನಾಲ್ವರು ಪೌರ ಕಾರ್ಮಿಕರಿಗೆ ನೀಡಿದರು.

ಆಕಾಶದಲ್ಲಿ ಹಾರಾಡುತ್ತಿದ್ದ ಆ ಹೆಲಿಕಾಪ್ಟರ್ ಕೇವಲ ಪ್ರವಾಸದ ಸಾಧನವಲ್ಲ, ಅದು ಪೌರ ಕಾರ್ಮಿಕರ ಬೆವರಿನ ಬೆಲೆಗೆ ಸಲ್ಲಿಸಿದ ನಮನವಾಗಿತ್ತು.

ನಮ್ಮ ನಗರದ ಸ್ವಚ್ಛತೆಯ ನಿಜವಾದ ಹೀರೋಗಳು ಪೌರ ಕಾರ್ಮಿಕರು. ಅವರಿಗೆ ತಲೆಬಾಗುವುದು ನನ್ನ ಗೌರವ. ಆಗಸದಿಂದ ಹಾಸನ ನಗರ ನೋಡಿದ ಅವರ ಮುಖದಲ್ಲಿ ಕಂಡ ಸಂತೋಷ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್  ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments