ಮೂಡಿಗೆರೆ : ನವೆಂಬರ್ 2ರಂದು ನಡೆಯಲಿರುವ ಮೂಡಿಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ(ಟಿಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸliದ್ದೇವೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಟಿ.ಎಂ. ಗಜೇಂದ್ರ ತರುವೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಟಿಎಪಿಸಿಎಂಎಸ್ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಗೂ ಬಿಜೆಪಿ ವರಿಷ್ಟರ ತೀರ್ಮಾನದಂತೆ ಮೈತ್ರಿಗೆ ಮನ್ನಣೆ ಹಾಕಲಾಗಿದೆ ಎಂದರು.
ಕೆಲ ಸದಸ್ಯರು ಪಕ್ಷವಿರೋಧಿ ಚಟುವಟನೆ ಮತ್ತು ಗೊಂದಲ ಮೂಡಿಸುತ್ತಿದ್ದಾರೆ. ಮತದಾರರು ಇದಕ್ಕೆ ಕಿವಿಗೊಡಬಾರದು ಎಂದರು.
ಎನ್.ಡಿ.ಎ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೊಂದಾಣಿಕೆಯ, ಗ್ರಾಮ ಪಂಚಾಯಿತಿ
ಚುನಾವಣೆಯಿಂದ ಲೋಕಸಭಾ ಚುನಾವಣೆ ವರೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಬೇಕು ಎಂದು ವರಿಷ್ಟರು ತೀರ್ಮಾನ ಕೈಗೊಂಡಿದ್ದಾರೆ..
ಪಕ್ಷದ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ದ ದೂರು ನೀಡುತ್ತೇವೆ. ಪ್ರಭಾವಿ ಪಕ್ಷಗಳು ಒಂದಾಗಿರುವುದರಿಂದ ಗಜ ಬಲ ಬಂದಿದೆ.
ಮೈತ್ರಿ ಪಕ್ಷವು ಎಲ್ಲಾ ಸ್ಥಾನಗಳನ್ನುಗೆಲ್ಲುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಬಾಳೂರು ಲಕ್ಷ್ಮಣಗೌಡ, ಹೂವಪ್ಪ, ಅಜಿತ್ ಬಾಳೂರು, ಅಶೋಕ್ ಗೌಡ, ಉತ್ತಮ್ ಹಂತೂರು,ಮಗ್ಗಲಮಕ್ಕಿ ರವಿ, ರೆಹಮಾನ್, ಸುರೇಂದ್ರ ಹ್ಯಾರಗುಡೆ, ನಿಡುವಾಳೆ ಚಂದ್ರು, ನೂರುಲ್ಲಾ, ರಘು ಉದುಸೆ , ಧರ್ಮೇಶ್, ಪ್ರಸನ್ನ, ಸಂದೇಶ್, ಮಂಜುನಾಥ್ ಮಡ್ಡಿಕೆರೆ, ಲೋಹಿತ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
