ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳು ಹಸು, ಗೋವು ಸೇರಿದಂತೆ ವನ್ಯಜೀವಿಗಳ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ,ಮಾಂಸಕ್ಕಾಗಿ ಹತ್ಯೆ ಮತ್ತು ಕಳ್ಳಸಾಗಣೆ,ದಾಳಿ, ಕ್ರೂರ ಹಿಂಸೆ, ಅಮಾನವೀಯ ಆಘಾತಕಾರಿ ಕೃತ್ಯಗಳು ಕಂಡುಬರುತ್ತಿವೆ.ಮೂಕ ಜೀವಿಗಳ ಸಂರಕ್ಷಣೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ವೀರೇಶ್ ಜಿ ಒತ್ತಾಯಿಸಿದ್ದಾರೆ.

ಹೌದು .. ಈಗಾಗಲೇ ರಾಜ್ಯ ದೇಶದಲ್ಲಿ ಕಟ್ಟುನಿಟ್ಟಿನ ಕಾನೂನು,ಕಾಯಿದೆಗಳು ಜಾರಿಯಲ್ಲಿ ಇದ್ದರು ಕೂಡ ಪ್ರಾಣಿಗಳ ತೇಜೋವಧೆ ಹೇಗಿಲ್ಲದೆ ಸಾಗಿದೆ.2016ರಲ್ಲಿ ಭಾರತ ದೇಶದಿಂದ ಗೋವಿನ ಮಾಂಸ ರಫ್ತು ಮಾಡುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿದೆ.
ಯಾವುದೇ ಹಾಲು ಕೊಡುವ ಗೋವು, ಹಸು ಜಾತಿಯ ಪ್ರಾಣಿಗಳನ್ನು ಮತ್ತು ಅದರ ಮಾಂಸವನ್ನು ಬೇರೆ, ಬೇರೆ ದೇಶಗಳಿಗೆ ವಿದೇಶಿ ವ್ಯಾಪಾರ ನಿಮಗಳ ಪ್ರಕಾರ ಮಾಂಸ ರಫ್ತು ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.ಕೇಂದ್ರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಿದೆ

ಆಹಾರ ಪದ್ಧತಿ ಹೆಸರಿನಲ್ಲಿ ಮೂಕ ಪ್ರಾಣಿಗಳ ಹತ್ಯೆ ,ಮಾಂಸ ಮಾರಾಟ ಸೇರಿದಂತೆ ಹಲವು ಚಟುವಟಿಕೆಗಳು ಕಾನೂನು ಬಾಹಿರವಾಗಿ ನಡೆಯುತ್ತಿದ್ದು,ಇದನ್ನು ತಡೆಗಟ್ಟಲು ಹಲವು ರಾಜ್ಯಗಳು ಕಾನೂನು ಮತ್ತು ವಿಧೇಯಕ ಮಾರ್ಗಸೂಚಿಗಳನ್ನು ತಂದಿವೆ.
ಇನ್ನು ಕರ್ನಾಟಕ ರಾಜ್ಯದಲ್ಲಿ ಹಲವಾರು ಕಾಯಿದೆ ಕಾನೂನು ಇವೆ,ರಾಜ್ಯ ಸರ್ಕಾರದ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ವಿಧೇಯಕ 2020ರ ಅನ್ವಯ ಗೋ ಹತ್ಯೆ ಮತ್ತು ಮಾಂಸ ಮಾರಾಟ ಸಂಪೂರ್ಣ ನಿಷೇಧವನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ.ವಿಧೇಯಕ ಪ್ರಕಾರ ಯಾರು ಜಾನುವಾರು ಆಕಳು,ಗೋವು ಸೇರಿದಂತೆ ಮೂಕ ಜೀವಿಗಳನ್ನು ಮಾಂಸಕ್ಕಾಗಿ ಹತ್ಯೆ ಮಾಡುವುದು,ಕಳ್ಳಸಾಗಣೆ ,ಮಾರಾಟಕ್ಕೆ ಅವಕಾಶ ಇಲ್ಲ,ಇದಕ್ಕೆ ಹಲವು ಇಲಾಖೆಗಳಿಗೆ ಜವಾಬ್ದಾರಿ ನೀಡಿದ್ದು ಪೊಲೀಸ್ ಇಲಾಖೆಗೆ ಹತ್ಯೆ,ಸಾಗಣೆ, ದಾಳಿ,ವಶ ಸೇರಿದಂತೆ ಕಾನೂನು ಪ್ರಕಾರ ಕೇಸು ದಾಖಲು ಮಾಡಲು ಅವಕಾಶ ಕೊಟ್ಟಿದೆ.ಇದಕ್ಕೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ ತೆಗೆಯುವಂತೆ ಸೂಚಿಸಿದೆ. ಜೊತೆಗೆ ಕಠಿಣ ಶಿಕ್ಷೆ ಸೇರಿದಂತೆ ಹಲವು ಕಾನೂನು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.
ಇಷ್ಟಾದರೂ ಜಿಲ್ಲೆ,ಜಿಲ್ಲೆಯಲ್ಲೂ ಗೋ ಸೇರಿದಂತೆ ಇತರೆ ವನ್ಯ ಪ್ರಾಣಿಗಳ ಕಳ್ಳ ಬೇಟೆ ,ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ.ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಯಾವುದೇ ವನ್ಯಜೀವಿಗಳನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧವಾಗಿದೆ.ಕಾಡಿನಲ್ಲಿ ಕಂಡುಬರುವ ಆಕಳು ಜಾತಿಯ ಮೂಲ ಪ್ರಬೇಧ ಕಾಟಿಯನ್ನು ಮಾಂಸಕ್ಕಾಗಿ ಹತ್ಯೆ ಮಾಡಿರುವುದು, ಜಿಲ್ಲೆಯಿಂದ ಜಿಲ್ಲೆಗೆ ಬಂದು ಬೇಟೆ ಆಡುವ ಪ್ರಸಂಗಗಳು ಕಾಣಸಿಗುತ್ತಿವೆ.

ಸರ್ಕಾರ ಮತ್ತು ಜಿಲ್ಲಾಡಳಿತ ಇದಕೆಲ್ಲ ಅವಕಾಶ ನೀಡಿದೆ ಸೂಕ್ತ ಕಾನೂನು ಕ್ರಮಗಳನ್ನು ಜಾರಿ ಮಾಡಿ ತಪ್ಪಿತಸ್ಥ ಜನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು ಮೂಕ ಜೀವಿಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕು ,ಇರುವ ಕಾನೂನನ್ನು ಜಾರಿಗೊಳಿಸಿ ಅವುಗಳು ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
