ಮೂಡಿಗೆರೆ : ತಾಲೂಕಿನ ಕಡಿದಾಳು ಗ್ರಾಮದ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ.
ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಅಡಿಕೆ ಕಾಫಿ, ಬಾಳೆ ತೋಟಗಳಿಗೆ ಕಾಡುಕೋಣಗಳು ನುಗ್ಗಿ ದಾಂಧಲೆ ನಡೆಸುತ್ತಿವೆ.

ಕಳೆದ ಒಂದು ತಿಂಗಳಿಂದ ಜಮೀನು ರೈತ ಕಾಡುಕೋಣಗಳ ಹಾವಳಿಗೆ ತುತ್ತಾಗಿದ್ದು, ತಮ್ಮ ಬೆಳೆಗಳನ್ನು ರಕ್ಷಿಸಲು ರೈತರು ಹೆಣಗಾಡುವಂತಾಗಿದೆ.
ಈ ಭಾಗದಲ್ಲಿ ತೋಟಗಳು ದೂರವಿದ್ದು ತೋಟದಲ್ಲಿ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತೋಟಕ್ಕೆ ಹೋಗಿಬರಲು ಕೂಡ ಜನರು ಭಯಪಡುವಂತಾಗಿದೆ. ವಾರದ ಹಿಂದೆ ವ್ಯಕ್ತಿಯೋರ್ವ ಮೈಮೇಲೆ ಎರಗಿ ಬಂದ ಘಟನೆ ಕೂಡ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕಾಡುಕೋಣಗಳು ತೋಟಕ್ಕೆ ಬಂದು ರೈತರಿಗೆ ತೊಂದರೆ ಕೊಡುತ್ತಿವೆ. ಐದಾರು ಕಾಡುಕೋಣಗಳು ಇರಬಹುದು ಎಂದು ಸ್ಥಳೀಯರಾದ ತಿಲಕ್ ತಿಳಿಸಿದ್ದಾರೆ.
ರೈತರಾದ ಸುರೇಶ್ ಗೌಡ, ತಿಲಕ್ ಹಾಗೂ ಚಂದನ್ ಅವರಿಗೆ ಸೇರಿದ ಕೃಷಿ ಭೂಮಿ ಕಾಡುಕೋಣ ದಾಳಿಯಿಂದ ಹಾಳಾಗಿದೆ.
ಅರಣ್ಯ ಇಲಾಖೆ ಕಾಡುಕೋಣ ಹಾವಳಿ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಡುಕೋಣಗಳನ್ನು ಓಡಿಸಬೇಕೆಂದು ಆಗ್ರಹಿಸಿದ್ದಾರೆ.
ವರದಿ :ಪುನೀತ್ ಕಡಿದಾಳ್
9483811948
