Saturday, August 15, 2026
Homeಜಿಲ್ಲಾಸುದ್ದಿಶೃಂಗೇರಿ: ತಾಲೂಕಿನಾದ್ಯಂತ ಧಾರಾಕಾರ ಮಳೆ: ಮನೆಯೊಳಗೆ ನುಗ್ಗಿದ ಚರಂಡಿ ನೀರು!

ಶೃಂಗೇರಿ: ತಾಲೂಕಿನಾದ್ಯಂತ ಧಾರಾಕಾರ ಮಳೆ: ಮನೆಯೊಳಗೆ ನುಗ್ಗಿದ ಚರಂಡಿ ನೀರು!

Telegram Group
Join Now

ಶೃಂಗೇರಿ: ತಾಲೂಕಿನಾದ್ಯಂತ ಧಾರಾಕಾರವಾಗಿ ಮತ್ತೆ ಮಳೆಯಾಗಿ ಹಲವು ಅನಾಹುತಗಳು ಸಂಭವಿಸಿವೆ. ಪಟ್ಟಣದ ವಿದ್ಯಾರಣ್ಯಪುರದಲ್ಲಿ ಬಳಿ ಚರಂಡಿ ನೀರು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಠಿಮಾಡಿದೆ.

ಹೌದು .. ವಿದ್ಯಾರಣ್ಯಪುರದ ಕೇರೋಡಿ ಗಣೇಶ್ ಮೂರ್ತಿ ಅವರ ಮನೆಗೆ ಈ ಹಿಂದೆಯೂ ಕೂಡ ಒಮ್ಮೆ ನೀರು ನುಗ್ಗಿ ಮನೆಯ ಗೋಡೆ ಕುಸಿದಿತ್ತು. ಆದರೆ, ಇದುವರೆಗೂ ಕೂಡ ಸಂಬಂಧಪಟ್ಟವರು ಯಾವುದೇ ಶಾಶ್ವತ ಪರಿಹಾರಗಳು ನೀಡಿಲ್ಲ ಎಂದು ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶಾಶತ್ವತ ಪರಿಹಾರವನ್ನು ಕೂಡಲೇ ಒದಗಿಸಿಕೊಡಬೇಕಾಗಿದೆ.

ಹಾಗೆ ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಪ್ರವಾಹ ಉಂಟಾಗಿ, ಮುಖ್ಯರಸ್ತೆಯಲ್ಲಿ ಒಂದು ಅಡಿ ನೀರು ಹರಿಯಿತು. ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments