Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: TAPCMS ಅಭಿವೃದ್ಧಿ ವೇದಿಕೆ ವತಿಯಿಂದ ಮತಯಾಚನೆ

ಮೂಡಿಗೆರೆ: TAPCMS ಅಭಿವೃದ್ಧಿ ವೇದಿಕೆ ವತಿಯಿಂದ ಮತಯಾಚನೆ

ಮೂಡಿಗೆರೆ: ನವೆಂಬರ್ 2 ರಂದು ನಡೆಯಲಿರುವ ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಅಂಗವಾಗಿ TAPCMS ಅಭಿವೃದ್ಧಿ ವೇದಿಕೆ ವತಿಯಿಂದ ಬಿರುಸಿನ ಪ್ರಚಾರ ಆರಂಭವಾಗಿದೆ.

ತಾಲ್ಲೂಕಿನ ಮಡ್ಡಿಕೆರೆ ಗ್ರಾಮದಲ್ಲಿ TAPCMS ಅಭಿವೃದ್ಧಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮತಯಾಚನೆಯಲ್ಲಿ ಭಾಗಿಯಾಗಿ ಮಾತನಾಡಿದ ರಂಜನ್ ಅಜಿತ್ ಕುಮಾರ್, ಪ್ರಾಮಾಣಿಕ ಆಡಳಿತಕ್ಕೆ ಒಳ್ಳೆಯ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮತದಾರರಿಗೆ ಮನವಿ ಮಾಡಿದರು.

ಅಭ್ಯರ್ಥಿಗಳು ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿದ್ದು, ಕಳೆದ TAPCMS ಅಧಿಕಾರದ ಅವಧಿಯಲ್ಲಿ ಯಾವುದೇ ಚ್ಯುತಿ ಬಾರದಂತೆ ಕೆಲಸ ಕಾರ್ಯಗಳನ್ನು ರೈತರ ಪರವಾಗಿ ನಿರ್ವಹಿಸಿರುತ್ತಾರೆ ಇಂತಹ ಅಭ್ಯರ್ಥಿಗಳನ್ನು ಮತ್ತೆ ಗೆಲ್ಲಿಸುವುದರ ಮೂಲಕ ತಾಲ್ಲೂಕಿನ TAPCMS ಸರ್ವತೊಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನ ಗ್ರಾಮಗಳಾದ ಕಡಿದಾಳು, ದಾರದಹಳ್ಳಿ, ಮಡ್ಡಿಕೆರೆ, ಕೊಣಗೆರೆ, ಕೆಸವಳಲು, ಹೊಸಕೆರೆ, ಬೈರಾಪುರ, ಸತ್ತಿಗನಹಳ್ಳಿ ಗ್ರಾಮದ ಮನೆ ಮನೆಗಳಿಗೆ ಹಿರಿಯ ಮುಖಂಡರು. ರಾಜಕೀಯ ಚತುರಾದ ಶ್ರೀ ಲಕ್ಶ್ಮಣ ಗೌಡ ಮಗ್ಗಲಮಕ್ಕಿ ಅವರು ತೆರಳಿ ಮತಯಾಚನೆ ಮಾಡಿದರು. ಹಾಗೆ ಹಿಂದುಳಿದ, ಬಡವರ ರೈತರ ಪರವಾಗಿದ್ದು ರೈತರಿಗೆ ದೊರಕುವ ಎಲ್ಲಾ ಸವಲತ್ತಗಳನ್ನು ತಲುಪಿಸಲು ಮಾತ್ರ ಸಾಧ್ಯ ಎಂದು ಹೇಳಿದರು. ಆದ್ದರಿಂದ ಮತದಾರರು ಅಭ್ಯರ್ಥಿಯನ್ನು ಅತ್ಯಧಿಕ ಮತ ನೀಡುವ ಮೂಲಕ ಗೆಲ್ಲಿಸಿ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸ ಬೇಕು ಎಂದು ಮನವಿ ಮಾಡಿದರು.

TAPCMS ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಎಲ್ಲರ ಮನ ಮೆಚ್ಚುವಂತಹ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂದು ಹೇಳಿದರು.

ಸಮಯ ವ್ಯರ್ಥ ಮಾಡದಂತೆ ತಮ್ಮ ಕೆಲಸ ಕಾರ್ಯಗಳನ್ನು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ. ಇವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲರನ್ನಾಗಿ ಮಾಡುವ ಮೂಲಕ ತಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ದೀಪಕ್ ಕಡಿದಾಳ್, ರಂಜಿತ್ ದಾರದಹಳ್ಳಿ, ವಿಜಯ್ ಕೆಸವಳಲು, ದಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿಕ್ರಂ ಗೌಡ, ಶಕುಂತಲಾ ಕೊಟ್ರುಕೆರೆ. ಭಾರತಿ ಕುನ್ನಹಳ್ಳಿ , ಎಂ. ಎಸ್. ಅನಂತ್, ಹೇಮಶೇಖರ್, ಮನು ಮಾಲಹಳ್ಳಿ ಸುರೇಶ್ ಮಗ್ಗಲಮಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!