Monday, February 9, 2026
Homeಜಿಲ್ಲಾಸುದ್ದಿಮೂಡಿಗೆರೆ: TAPCMS ಅಭಿವೃದ್ಧಿಗೆ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿ: ಗಜೇಂದ್ರ ಕೊಟ್ಟಿಗೆಹಾರ

ಮೂಡಿಗೆರೆ: TAPCMS ಅಭಿವೃದ್ಧಿಗೆ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿ: ಗಜೇಂದ್ರ ಕೊಟ್ಟಿಗೆಹಾರ

ಮೂಡಿಗೆರೆ: ಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದು. ನ.2ರಂದು ನಡೆಯುವ ಟಿಎಪಿಸಿಎಂಎಸ್ ಚುನಾವಣೆಯಲ್ಲಿ 8 ಸದಸ್ಯರನ್ನು ಒಳಗೊಂಡ ಮೈತ್ರಿ ಅಭ್ಯರ್ಥಿಗಳನ್ನು ವಿಜಯ ಶಾಲಿ ಗಳನ್ನಾಗಿ ಮಾಡುವಂತೆ ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಮತದಾರರಲ್ಲಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ TAPCMS ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎಲ್ಲಾ ಭಾಗಗಳಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು

TAPCMS ನಿಂದ ಕಳೆದ ಬಾರಿ ರೈತಭವನದಲ್ಲಿ ವರನ ಕೊಠಡಿ, ಶೌಚಾಲಯ, ಮಂಟಪ, ಫಾಲ್ ಸೀಲಿಂಗ್, ಅಡುಗೆ ಮನೆಗೆ ಕಾಂಕ್ರೀಟ್, ಗೋಡಗೆ ಟೈಲ್ಸ್, ಗುಣಮಟ್ಟದ ಅಡುಗೆ ಪಾತ್ರೆಗಳು, ವಿದ್ಯುತ್ ವೈರಿಂಗ್ ನವೀಕರಣ, ಸಂಸ್ಥೆ ಕಚೇರಿ ಹಿಂಭಾಗ ಹಾಗೂ ರೈತಭವನದ ಬಲಭಾಗ ರೆಡಿಮೆಡ್ ಕಾಂಪೌಂಡ್, ರೈತರ ಮಕ್ಕಳಿಗೆ ಅರ್ಹತೆ ಆಧಾರದಲ್ಲಿ ಉದ್ಯೋಗ ಒದಗಿಸಲಾಗಿದೆ. ಮುಂದಿನ ದಿನದಲ್ಲಿ ಎಂ.ಜಿ.ರಸ್ತೆಯಲ್ಲಿರುವ ಹಳೆ ಕಟ್ಟಡ ಕೆಡವಿ 4 ಅಂತಸ್ತಿನ ಕಟ್ಟಡ ನಿರ್ಮಾಣ,ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆ ಮೇಲಂತಸ್ತಿನಲ್ಲಿ ಮಳಿಗೆ ಹಾಗೂ ಮಿನಿ ಹಾಲ್ ನಿರ್ಮಾಣ, ರೈತಭವನ ಮುಖ್ಯ ಧ್ವಾರಕ್ಕೆ ಕಮಾನು, ಪೆಟ್ರೋಲ್ ಬಂಕ್, ನಂದಿನಿ ಹಾಲಿನ ಡೈರಿ ಸೇರಿದಂತೆ ಅನೇಕ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಾಳೂರು ಲಕ್ಷ್ಮಣ ಗೌಡ ಮಾತನಾಡಿ, ಈಗಾಗಲೇ ಮೂಡಿಗೆರೆ ಹಾಗೂ ಕಳಸ ತಾಲೂಕು ವ್ಯಾಪ್ತಿಯ 14 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಟಿಎಪಿಸಿಎಂಎಸ್‌ಗೆ ಎ.ಶ್ರೇಣಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಸನ್ನ ಗೌತಳ್ಳಿ, ಎಂ.ಎಲ್.ಕಲ್ಲೇಶ್, ವಿ.ಕೆ.ಶಿವೇಗೌಡ, ಟಿ.ಎಂ.ಗಜೇಂದ್ರ, ಪ್ರಸನ್ನ ಮುಗ್ರಹಳ್ಳಿ ಆಯ್ಕೆಯಾಗಿದ್ದಾರೆ. ಇವರ ಜತೆಗೆ ಕಣದಲ್ಲಿರುವ 8 ಅಭ್ಯರ್ಥಿಗಳ ಗೆಲುವು ಕೂಡ ನಿಶ್ಚಿತವಾಗಿರುವುದರಿಂದ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ ಎಂದರು.

ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಮತದಾರರು ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್, ಮುಖಂಡರಾದ ರಘು ಜನ್ನಾಪುರ, ವಿನಯ್ ಹಳೆಕೋಟೆ, ಎಂ.ಸಿ.ಹೂವಪ್ಪ, ರವಿ ಮಗ್ಗಲಮಕ್ಕಿ, ಜಿ.ಎಂ.ಪ್ರಸನ್ನ, ಉತ್ತಮ್ ಹಂತೂರು, ಸುರೇಂದ್ರ ಹ್ಯಾರಗುಡ್ಡೆ, ಧನಿಕ್ ಕೋಡದಿಣ್ಣೆ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!