Wednesday, March 25, 2026
Homeಜಿಲ್ಲಾಸುದ್ದಿಕೊಪ್ಪ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷರ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ

ಕೊಪ್ಪ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷರ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ

ಕೊಪ್ಪ: ಶೃಂಗೇರಿ ಕ್ಷೇತ್ರದ ಕೊಪ್ಪ ತಾಲೂಕಿನಲ್ಲಿ ಸರ್ಕಾರದಿಂದ ರೈತರಿಗೆ ಬರಬೇಕಾದ ಬೆಳೆ ವಿಮೆ, ಅತಿವೃಷ್ಟಿಯಿಂದ ಹಾಳಾದಂತ ತೋಟಗಳಿಗೆ ಕೊಳೆ ಪರಿಹಾರ ಹಾಗೂ ರೈತರ 53, 57, 94 ಸಿ, 94 ಸಿಸಿ ಅಡಿಯಲ್ಲಿ ಕೊಟ್ಟಂತ ಅರ್ಜಿಗಳನ್ನು ವಿಲೇವಾರಿ ಮಾಡದೆ  ಇಟ್ಟಿರುವ ಕಾರಣಕ್ಕೆ ಸರ್ಕಾರ ಈ ಕೂಡಲೇ ಅತಿವೃಷ್ಟಿ ಹಣ ಹಾಗೂ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಹಾಗು ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಕೃಷಿ ಯಂತ್ರೋಪಕರಣಗಳ ಸಬ್ಸಿಡಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕೊಪ್ಪ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಕೊಪ್ಪ ಮಂಡಲದ ಅಧ್ಯಕ್ಷರಾದ  ದಿನೇಶ್ ಹೊಸೂರು ಈ ಸರ್ಕಾರ ರೈತರಿಗೆ ಒಂದೇ ಒಂದು ನಯಾ ಪೈಸೆಯೂ ನೀಡಿಲ್ಲ. ಹಿಂದೆ ನಮ್ಮ ಸರ್ಕಾರ ಇದ್ದಾಗ ರೈತರಿಗೆ ಬೇಕಾದ ಮೈಲುತುತ್ತು ಹಾಗೂ ಇನ್ನಿತರ ಕೃಷಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಹಕಾರವನ್ನು ನೀಡುತಿತ್ತು. ಆದರೆ ಈ ಸರ್ಕಾರ ರೈತರಿಗೆ ಯಾವುದೇ ಸಹಕಾರವನ್ನು ನೀಡದೆ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದರು.

ಈ ಸಂಧರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಶಿವಪುರ, ವಿಶೇಷ್ ಭಟ್ ಭಂಡಿಗಂಡಿ, ಹರಿಹರಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಷತನಿಕ್, ಜಯಂತ್ ಹೊರಬೈಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ರೋಹಿತ್, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ರೇಖಾ ಪ್ರಕಾಶ್, ಪಟ್ಟಣ ಪಂಚಾಯತಿ ಸದಸ್ಯರಾದ ಇಸ್ಮಾಯಿಲ್ ಇದಿನಬ್ಬ, ಉಪಾಧ್ಯಕ್ಷರಾದ ಗಾಯತ್ರಿಶೆಟ್ಟಿ, ಕಸಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸಂದೇಶ್ ಶೆಟ್ಟಿ, ಉದಯ್ ಕುಮಾರ್ ಜೈನ್, ಹರ್ಷ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಗಾಯತ್ರಿ ಭಟ್, ಕೊಪ್ಪ ತಾಲೂಕಿನ ವಕ್ತಾರರಾದ ಜಗದೀಶ್ ನುಗ್ಗಿ, ಬಿಂತ್ರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿದ್ಯಾ, ಯುವ ಮೋರ್ಚಾದ ಜಿಲ್ಲಾ ಸಮಿತಿ ಸದಸ್ಯರಾದ ಸವಿನ್ ಚಿತ್ಲೆಹಡ್ಲು, ತಾಲೂಕಿನ ಪ್ರಧಾನ ಕಾರ್ಯದರ್ಶಿ ಆಕಾಶ್ ಗೌಡ, ರಂಜಿತ್ ಶೆಟ್ಟಿ ಹಾಗೂ ಇತರರಿದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!