Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ :TAPCMS ಚುನಾವಣೆಯಲ್ಲಿ ಅನುಕುಮಾರ್ ಯಶಸ್ಸು: ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಸನ್ಮಾನ

ಮೂಡಿಗೆರೆ :TAPCMS ಚುನಾವಣೆಯಲ್ಲಿ ಅನುಕುಮಾರ್ ಯಶಸ್ಸು: ಹಿಂದೂ ಪರ ಸಂಘಟನೆ ಕಾರ್ಯಕರ್ತರಿಂದ ಸನ್ಮಾನ

ಮೂಡಿಗೆರೆ : ಇತ್ತೀಚಿಗೆ ನಡೆದ TAPCMS ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿನ ರೂವಾರಿ ಶ್ರೀ ಅನುಕುಮಾರ್ ಅವರಿಗೆ ಆಲ್ದೂರು ಹಾಗೂ ಮೂಡಿಗೆರೆ ಮಂಡಲ ಹಿಂದೂ ಪರ ಸಂಘಟನೆ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು

ಪ್ರಭಾವಿಗಳಿಗೆ ಸೆಡ್ಡು ಹೊಡೆದು. ತನ್ನ ಸಹಪಾಠಿಗಳ ಗೆಲುವಿಗೆ ಸಾಕ್ಷಿಯಾದ ಅನುಕುಮಾರ್ ಪಟ್ಟದ್ದೂರು ಪುಟ್ಟಣ್ಣ ಅವರನ್ನು ಆಲ್ದೂರು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಗೌರವಿಸಿದರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಟ್ಟಣ್ಣ ಪಟ್ಟದ್ದೂರು ಇದು ನನ್ನ ಗೆಲುವು ಮಾತ್ರವಲ್ಲ ಕಾರ್ಯಕರ್ತರ ನೈಜ ಗೆಲುವು ಎಂದರು ಹಾಗೆ ಕಾರ್ಯಕರ್ತರ ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ ಆಯ್ತು ಎಂದರು

ಸ್ಪರ್ಧಾತ್ಮಕ ಯುಗದಲ್ಲಿ ಕಾಲಹರಣ ಮಾಡಬಾರದು. ಸತತ ಪರಿಶ್ರಮದ ಕಡೆಗೆ ಒಲವು ತೋರಿದರೆ ಮಾತ್ರ ನಾವು ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದು ಯುವ ಸಮೂಹಕ್ಕೆ ಕಿವಿ ಮಾತು ಹೇಳಿದರು.

ಈ ಸ್ಥಾನವು ಜನ ಸೇವೆಗೆ ದೊರೆತ ಅವಕಾಶವಾಗಿದೆ. ತಾಲ್ಲೂಕಿನಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಿತ್ತೇನೆ. ಮತದಾರರು ಇದೀಗ ಹೊಸ ಜವಾಬ್ದಾರಿ ವಹಿಸಿದ್ದು. ಬರುವ ದಿನಗಳಲ್ಲಿ TAPCMS ಸಮಗ್ರ ಅಭಿವೃದ್ಧಿಗೆ ದುಡಿಯುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಬ್ಬಿಣ ಸೇತುವೆ ಗ್ರಾಮ ಪಂಚಾಯಿತಿ ಸದಸ್ಯ ಸ್ವರೂಪ್ ಗೌಡ. ಯೋಗೇಶ್ ಪಟೇಲ್ ಪುರ, ಸಂತೋಷ್ ಮೇಕನಗದ್ದೆ, ಪ್ರಸಾದ್ ಹುಲ್ಲೆಮನೆ, ಮಿಥುನ್ ಆಲ್ದೂರು, ಸುಪ್ರೀತ್ ಅರೇನೂರು, ಪ್ರದೀಪ್ ಪಟ್ಟದೂರು, ಜಯಂತ್ ಮಡೇನೆರಲು, ಅತ್ಹ್ಮಿಕ್ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು

ವರದಿ :ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!