Tuesday, August 11, 2026
Homeಕ್ರೈಮ್ಶಿವಮೊಗ್ಗ: ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

ಶಿವಮೊಗ್ಗ: ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

Telegram Group
Join Now

ಶಿವಮೊಗ್ಗ: ಇಲ್ಲಿನ ಕೋಟೆ ರಸ್ತೆಯ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ನ ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ.

ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತ ವಿದ್ಯಾರ್ಥಿನಿ. ಹಾಸ್ಟೆಲ್‌ನ ಟೆರೇಸ್‌ನಲ್ಲಿರುವ ನೀರಿನ ಟ್ಯಾಂಕ್‌ ಪಕ್ಕದಲ್ಲಿ ವನಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಟೆರೇಸ್‌ ಮೇಲೆ ಹೋದ ವಿದ್ಯಾರ್ಥಿನಿಯರು ಇದನ್ನು ಗಮನಿಸಿ ಕೂಡಲೇ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲ. ವನಿಷಾ, ಡಿವಿಎಸ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿ ಓದುತ್ತಿದ್ದರು. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments