Friday, March 27, 2026
Homeಕ್ರೈಮ್ಶಿವಮೊಗ್ಗ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: KSRTC ಡಿಪೋ ಭದ್ರತಾ ಸಿಬ್ಬಂದಿ ಸಾವು

ಶಿವಮೊಗ್ಗ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: KSRTC ಡಿಪೋ ಭದ್ರತಾ ಸಿಬ್ಬಂದಿ ಸಾವು

ಶಿವಮೊಗ್ಗ: ಸಾಗರದ ಕೆಎಸ್ಆರ್‌ಟಿಸಿ ಡಿಪೋದ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತರನ್ನು ಸಾಗರದ ನಿವಾಸಿ ಸಂದೀಪ್ (41) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಪಾಳಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಂದೀಪ್​ರನ್ನು ಸಹೋದ್ಯೋಗಿಗಳು ಬಸ್ಸಿನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲೇ ಸಂದೀಪ್ ಸಾವನ್ನಪ್ಪಿದ್ದಾರೆ.

ಆಸ್ಪತ್ರೆಗೆ ಕರೆದುಕೊಂಡು ಬಂದ ಸಿಬ್ಬಂದಿ ಚಂದ್ರು ಮಾತನಾಡಿ, ನಾನು ಬಸ್​ನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ‌ ಮಾಡುತ್ತಿದ್ದೇನೆ. ರಾತ್ರಿ ನಾನು ಬಸ್‌ನ್ನು ಡಿಪೋಗೆ ಬಿಡಲು ಬಂದಾಗ ಗೇಟ್ ಬಳಿ ಹಾರ್ನ್ ಮಾಡಿದ್ರು ಸಹ ಸಂದೀಪ್ ಅವರು ಹೊರಗೆ ಬರಲಿಲ್ಲ. ಇವರು ಬಂದು ಬಸ್ ಚೆಕ್ ಮಾಡಿದ ಮೇಲೆಯೇ ಬಸ್ ಒಳಗೆ ಬಿಡಬೇಕಿತ್ತು. ಬಹಳ ಹೊತ್ತು ಇವರು ಬಾರದ ಕಾರಣಕ್ಕೆ ಇವರ ರೂಮ್‌ನಲ್ಲಿ ಹೋಗಿ ನೋಡಿದಾಗ ಇವರು ಕುಸಿದು ಬಿದ್ದಿದ್ದರು. ತಕ್ಷಣ ನಮ್ಮದೇ ಬಸ್​ನಲ್ಲಿ ಸಂದೀಪ್​ ಅವರನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದೆವು. ಅಷ್ಟೊತ್ತಿಗಾಗಲೇ ಸಂದೀಪ್ ತೀರಿ ಹೋಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!