Tuesday, August 11, 2026
Homeಕ್ರೈಮ್ಕೊಪ್ಪ: ಕಾಣೆಯಾಗಿದ್ದ ವ್ಯಕ್ತಿಯನ್ನು ಗುಣವಂತೆ ಕಾಡಿನಲ್ಲಿ ಪತ್ತೆ ಹಚ್ಚಿದ ಪೊಲೀಸ್‌ ಶ್ವಾನ

ಕೊಪ್ಪ: ಕಾಣೆಯಾಗಿದ್ದ ವ್ಯಕ್ತಿಯನ್ನು ಗುಣವಂತೆ ಕಾಡಿನಲ್ಲಿ ಪತ್ತೆ ಹಚ್ಚಿದ ಪೊಲೀಸ್‌ ಶ್ವಾನ

Telegram Group
Join Now

‌ ಕೊಪ್ಪ: ಕಳೆದ ನಾಲ್ಕು ದಿನದ ಹಿಂದೆ ಕೊಪ್ಪ ತಾಲೂಕಿನ ಗುಬ್ಬುಗಡ್ಡೆ ನಿವಾಸಿ 77 ವರ್ಷದ ವೆಂಕಟೇಗೌಡ ಎಂಬುವರು ನಾಪತ್ತೆಯಾಗಿದ್ದು ಇಂದು ಗುಣವಂತೆ ಕಾಡಿನಲ್ಲಿ ಪೊಲೀಸ್‌ ಶ್ವಾನದ ಮೂಲಕ ಪತ್ತೆ ಹಚ್ಚಲಾಗಿದೆ.

ಹೌದು .. ಕೊಪ್ಪ ತಾಲೂಕಿನ ಗುಬ್ಬುಗಡ್ಡೆ ನಿವಾಸಿ 77 ವರ್ಷದ ವೆಂಕಟೇಗೌಡ ಎಂಬುವರು ನಾಪತ್ತೆಯಾಗಿದ್ದು ಎಂದು ಕೊಪ್ಪ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರ್ನಾಲ್ಕು ದಿನಗಳಿಂದ ಸತತ ಹುಡುಕಾಟ ನಡೆಸಿದ್ದರು ಹಾಗೆ ಸಿಗದೇ ಇದ್ದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಶ್ವಾನ ದಾಳವನ್ನು ಬಳಸಿಕೊಳ್ಳಲಾಗಿತ್ತು. ಇದರ ನೇತೃತ್ವದಲ್ಲಿ ಹುಡುಕಾಟದ ಕಾರ್ಯಚರಣೆ ನಡೆಸಿದಾಗ ಇಂದು ಗುಣವಂತೆ ಕಾಡಿನಲ್ಲಿ ಕಾಣೆಯಾಗಿದ್ದ ವ್ಯಕ್ತಿ ಪತ್ತೆಯಾದರು.

ಈ ಕಾರ್ಯಾಚರಣೆಯಲ್ಲಿ ಕೊಪ್ಪ ಪಿಎಸ್ಐ ಬಸವರಾಜ್ ಪೇದೆಗಳಾದ ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್‌ ಶ್ವಾನದ ಮೂಲಕ ವ್ಯಕ್ತಿಯನ್ನು ಹುಡುಕಿದ್ದಕ್ಕೆ ಅಲ್ಲಿನ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರು ಶ್ವಾನಕ್ಕೊಂದು ಮೆಚ್ಚುಗೆ ಸಲ್ಲಿಸಿದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments