ಮೂಡಿಗೆರೆ : ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪ್ರಭಾವಿ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬಂದಿದ್ದು. ಈ ವಿಚಾರವಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಪ್ರಸನ್ನ ತಿಳಿಸಿದ್ದಾರೆ.
ಪ್ರಭಾವಿಗಳಿಂದ ಬೆದರಿಕೆ ಕರೆಗಳು ಬಂದಿದ್ದು ಹೆದರಿ ರಾಜೀನಾಮೆ ನೀಡಲು ತಾವು ಮುಂದಾಗಿದ್ದೇನೆ ಎಂಬ ಊಹಾ ಪೋಹಗಳು ಕೇಳಿ ಬಂದಿದ್ದು. ಯಾವುದೇ ಕಾರಣಕ್ಕೂ ರಾಜೀನಾಮೆ ಮಾತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ
ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ತಾವು ಮುಂದಾಗಿದ್ದೇನೆ ಎಂಬ ವರದಿಯನ್ನು ಖಡಾಖಂಡಿತವಾಗಿ ಅಲ್ಲಗೆಳೆದಿದ್ದಾರೆ.
ನನ್ನ ಕಾರ್ಯಕರ್ತರು ನನ್ನೊಂದಿಗಿದ್ದು ನನ್ನೊಂದಿಗೆ ಚರ್ಚಿಸಿದ್ದಾರೆ. ಹೀಗಿದ್ದೂ ಯಾರೋ ಕೆಲವರು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.
ತಾಲೂಕಿನ ಮಾಕೋನಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿ ಈಗಾಗಲೇ ನಾನು ಅಧಿಕಾರ ವಹಿಸಿಕೊಂಡಿದ್ದು. ಆದರೆ ಇನ್ನೂ ಗ್ರಾಮಪಂಚಾಯಿತಿಗಳ ಅವಧಿ ಮುಗಿಯುವ ಹಂತದಲ್ಲಿ ಇದ್ದು ಇನ್ನು ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿಗಳ ಮರುಚುಣಾವಣೆಗೆ ಎರಡು ತಿಂಗಳಿರುವಾಗ ಹಾಲಿ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಪ್ರಭಾವಿ ರಾಜಕೀಯ ವ್ಯಕ್ತಿಗಳು ಮಾನಸಿಕ ಹಿಂಸೆ ಹಾಗೂ ಒತ್ತಡವನ್ನು ನೀಡಿ ರಾಜಿನಾಮೆ ನಿಡಲು ಒತ್ತಾಯಿಸುತ್ತಿದ್ದಾರೆ ಎಂದರು.
ಹಾಗೇಯೆ ಗ್ರಾಮದ ಮುಖಂಡನೊಬ್ಬ ಇನ್ನೊಂದು ಪಕ್ಷದ ಮುಖಂಡರೊಂದಿಗೆ ಶಾಮೀಲಾಗಿ ತನ್ನದೆ ಪಕ್ಷದ ಹಾಲಿ ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಒತ್ತಡ ಹಾಕುತ್ತಿರುವುದಾಗಿ ತಿಳಿಸಿದರು.
ಇದನ್ನು ಮನಗಂಡ ಆ ಗ್ರಾಮದ ಗ್ರಾಮಸ್ಥರು, ಮುಖಂಡರು ಹಾಗೂ ಕಾರ್ಯಕರ್ತರು ಅಧ್ಯಕ್ಷರಾದ ಪ್ರಸನ್ನ ಅವರ ಮನೆಗೆ ತೆರಳಿ ತಾವು ಯಾವುದೇ ಧಮ್ಕಿ, ಬೆದರಿಕೆ , ಒತ್ತಡಕ್ಕೆ ಮಣಿಯದೆ ಇನ್ನೂ ಇರುವ ಅವಧಿಗೆ ತಾವೇ ಅಧ್ಯಕ್ಷರಾಗಿ ಮುಂದುವರೆಯುವಂತೆ ತಿಳಿಸಿ ನಿಮ್ಮ ಜೊತೆ ನಾವೆಲ್ಲರು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯವನ್ನು ತುಂಬಿರುತ್ತಾರೆ.
ಹಾಗೆಯೇ ಇಷ್ಟೆಲ್ಲ ರಾಜಕೀಯ ಆಟ ಆಡುತ್ತಿರುವ ವ್ಯಕ್ತಿಗಳಿಗೆ ಹಾಗೂ ಅವರೊಂದಿಗೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ಮಾಡುವ ಮುಖಂಡನಿಗೂ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುತ್ತದೆ ಎಂದು ತಿಳಿಸಿದರು
