ಎನ್ ಆರ್ ಪುರ: ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಚರ್ಚೆ ಮಾಡುವಾಗ ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ ಮತ್ತು ರಾಜೇಗೌಡ ನಡುವೆ ಮಾತುಕತೆ ನಡೆದಿತ್ತು.
ಈ ಮಾತುಕತೆಯ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಶಾಸಕರಾದ ರಾಜೇಗೌಡರ ಕುರಿತು ಅವಹೇಳನ ಮತ್ತು ಅಪಮಾನ ಮಾಡಿ ಬೆದರಿಕೆ ಹಾಕಲಾಗಿದ್ದು
ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಆತನ ವಿರುದ್ಧ ಕ್ರಮ ತೆದೆದುಕೊಳ್ಳಬೇಕೆಂದು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಮನೋಜ್ ಕುಮಾರ್ ಹಾಗೂ ಕಾರ್ತಿಕ್ ಎಂಬುವವರು ದೂರು ನೀಡಿದ್ದಾರೆ.
