Wednesday, October 7, 2026
Homeಗ್ರೇಟರ್ ಬೆಂಗಳೂರುVegetable Price: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ: ಟೊಮೆಟೊ, ಬೀನ್ಸ್ ದುಪ್ಪಟ್ಟಾಗಿ ಗ್ರಾಹಕರಿಗೆ ಹೊರೆ

Vegetable Price: ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ: ಟೊಮೆಟೊ, ಬೀನ್ಸ್ ದುಪ್ಪಟ್ಟಾಗಿ ಗ್ರಾಹಕರಿಗೆ ಹೊರೆ

Telegram Group
Join Now

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಕೆ. ಆರ್. ಮಾರುಕಟ್ಟೆಯಲ್ಲಿ ತರಕಾರಿಗಳ ದರ ದಿಢೀರ್ ಏರಿಕೆ ಕಂಡಿದೆ. ಟೊಮೆಟೊ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಪರಿಣಾಮವಾಗಿ ಕೆಲವು ಚಿಲ್ಲರೆ ವ್ಯಾಪಾರಿಗಳು ತರಕಾರಿಗಳನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಹಾಗೆ ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತರಕಾರಿಗಳು ಕೊಳೆತು ಅಪಾರ ಹಾನಿ ಕೂಡಾ ಸಂಭವಿಸಿದೆ. ಇವೆಲ್ಲದರ ಪರಿಣಾಮವಾಗಿ ತರಕಾರಿಗಳ ಬೆಲೆ ಗಗನಕ್ಕೇರಿದೆ.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿರುವ ಕಾರಣ ಮಾರುಕಟ್ಟೆಯಲ್ಲಿ ಸಿಗುವ ವೋಲ್‌ ಸೇಲ್ ತರಕಾರಿ ದರಕ್ಕೂ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ಹಾಗೂ ತಳ್ಳುವ ಗಾಡಿಗಳಲ್ಲಿ ಸಿಗುವ ರೀಟೇಲ್ ದರಕ್ಕೂ ಭಾರೀ ವ್ಯತ್ಯಾಸ ಕಾಣಬಹುದಾಗಿದೆ. ಹೀಗಾಗಿ, ತರಕಾರಿ ಬೆಳೆದು ಮಾರುಕಟ್ಟೆಗೆ ತರುವ ರೈತರಿಗೆ ಸಿಗುವ ಆದಾಯ ಬಹಳ ಕಡಿಮೆ.

ಕಳೆದ ವಾರ ಕೆ.ಜಿ.ಗೆ 25 ರೂ. ಇದ್ದ ಟೊಮೆಟೊ ಬೆಲೆ ಇದೀಗ 54 ರೂ.ಗೆ ಏರಿಕೆಯಾಗಿದೆ. ಬೀನ್ಸ್ ಬೆಲೆ 70 ರೂ.ನಿಂದ 96 ರೂ.ಗೆ ಹೆಚ್ಚಾಗಿದೆ. ಬಿಳಿ ಬದನೆಕಾಯಿ, ಕ್ಯಾಪ್ಸಿಕಂ, ಗೋರಿಕಾಯಿ, ಸೌತೆಕಾಯಿ, ಮೂಲಂಗಿ ಹಾಗೂ ಬೀಟ್‌ರೂಟ್ ಬೆಲೆಯಲ್ಲೂ ಏರಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!