Saturday, March 28, 2026
Homeಜಿಲ್ಲಾಸುದ್ದಿಮೂಡಿಗೆರೆ : ಆರಾಧ್ಯ ದೈವ ಆಂಜನೇಯನಿಗೆ ಹರಕೆ ಕೊಟ್ಟ NDA ಕಾರ್ಯಕರ್ತರು

ಮೂಡಿಗೆರೆ : ಆರಾಧ್ಯ ದೈವ ಆಂಜನೇಯನಿಗೆ ಹರಕೆ ಕೊಟ್ಟ NDA ಕಾರ್ಯಕರ್ತರು

ಮೂಡಿಗೆರೆ: TAPCMS ಚುನಾವಣೆಯಲ್ಲಿ NDA ಅಭ್ಯರ್ಥಿಗಳು ಅಭೂತ ಪೂರ್ವ ಗೆಲವು ಸಾದಿಸಲು ಕಾರ್ಯಕರ್ತರು ಹರಕೆ ಹೊತ್ತಿದ್ದೂ ಹರಕೆಯನ್ನೂ ಭಕ್ತಿ ಪೂರ್ವಕವಾಗಿ ನೆರವೇರಿಸಿದರು.

ಅನುಕುಮಾರ್(ಪಟ್ಟದ್ದುರು ಪುಟ್ಟಣ್ಣ ) ಅವರ ನೇತೃತ್ವದ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಈ ಬಾರಿ TAPCMS ಚುನಾವಣೆಯಲ್ಲಿ ಭಾಗವಹಿಸಿ ಗೆಲುವಿನ ಇತಿಹಾಸ ಬರೆದಿದ್ದು ಗೋಣಿಬೀಡಿನ ಆಂಜನೇಯ ದೇವಸ್ಥಾನದಲ್ಲಿ ಕಾರ್ಯಕರ್ತರ ಇಚ್ಛೆಯಂತೆ ಪೂಜೆ ಸಲ್ಲಿಸಿದರು. ಚುನಾವಣೆ ಮುಂಚೆ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದು ಸಂಕಲ್ಪ ಪೂಜೆ ಸಲ್ಲಿಸಲಾಯಿತು

ನವೆಂಬರ್ 2 ರಂದು ನಡೆದ TAPCMS ಚುನಾವಣೆಯಲ್ಲಿ TAPCMS ಅಭಿವೃದ್ಧಿ ವೇದಿಕೆ ಅಭ್ಯರ್ಥಿಗಳ ಹೀನಾಯ ಸೋಲಿಗೆ ರಣತಂತ್ರ ರೂಪಿಸಿ ವಿಜಯಪತಾಕೆ ಹಾಡಿದ ಪುಟ್ಟಣ್ಣ ಅವರ NDA ತಂಡ ಚುನಾವಣೆ ಫಲಿತಾಂಶದಲ್ಲಿ ಹೊಸ ದಾಖಲೆ ಬರೆದು ಮುಂದಿನ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸವಾಲ್ ಎಸೆದು ರಾಜಕೀಯ ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದು ಸತ್ಯ ವಾಗಿದೆ.

ಈ ಸಂದರ್ಭದಲ್ಲಿ TAPCMS ಸದಸ್ಯರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವೇಗೌಡ, ತಾಲ್ಲೂಕು ಉಪಾಧ್ಯಕ್ಷ ಸುನಿಲ್ ನಿಡಗೋಡು, ಬಿಜೆಪಿ ಗೋಣಿಬೀಡು ಘಟಕದ ಭರತ್ ವಾಲೆಕರಟ್ಟೆ, ಸಾಮಾಜಿಕ ಜಾಲತಾಣ ಮುಖ್ಯಸ್ಥ ಸುನಿಲ್ ಮಣ್ಣಿಕೆರೆ, ಪ್ರಕಾಶ್ ಕಿರಗುಂದ ಸೇರಿದಂತೆ ಅನೇಕರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!