ಶೃಂಗೇರಿ: ಸ್ಕೂಟಿ ಹಾಗೂ ವ್ಯಾಗನರ್ ಕಾರಿನ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಶೃಂಗೇರಿ ಪಟ್ಟಣದ ಕಿಗ್ಗಾ ಸರ್ಕಲ್ ಬಳಿ ನಡೆದಿದೆ.

ಬೆಟಗೆರೆ ಗ್ರಾಮದ ನಿವಾಸಿ ವಿಜಯಲಕ್ಷ್ಮಿ ಮೃತ ಮಹಿಳೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಹಿಂದೆಯಿಂದ ವೇಗವಾಗಿ ಬಂದ ವ್ಯಾಗನಾರ್ ಕಾರೊಂದು ಡಿಕ್ಕಿ ಹೊಡೆದಿದ್ದು, ಸ್ಕೂಟಿಯ ಹಿಂಬದಿಯಿದ್ದ ಮಹಿಳೆ ಕೆಳಬಿದ್ದಿದ್ದಾರೆ. ಬಳಿಕ ಪೆಟ್ಟಾಗಿ ಬಿದ್ದಿದ್ದ ಮಹಿಳೆಯ ಮೇಲೆ ಕಾರ್ ಹತ್ತಿದ್ದು ಪರಿಣಾಮ ವಿಜಯಲಕ್ಷ್ಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬುಧವಾರ ಸಂಜೆ ವೇಳೆಗೆ ಈ ಘಟನೆ ಸಂಭವಿಸಿದ್ದು . ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
