Saturday, September 26, 2026
Homeಕ್ರೈಮ್ಸಕಲೇಶಪುರ: ಬೀದಿ ಬದಿಯ ತರಕಾರಿ ಅಂಗಡಿಗೆ ನುಗ್ಗಿದ ಕಾರು: ಅದೃಷ್ಟವಶಾತ್‌ ಮಹಿಳೆ ಪಾರು!

ಸಕಲೇಶಪುರ: ಬೀದಿ ಬದಿಯ ತರಕಾರಿ ಅಂಗಡಿಗೆ ನುಗ್ಗಿದ ಕಾರು: ಅದೃಷ್ಟವಶಾತ್‌ ಮಹಿಳೆ ಪಾರು!

Telegram Group
Join Now

ಸಕಲೇಶಪುರ : ಪಟ್ಟಣದ ಬಾಳೆಗದ್ದೆ ಹಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು ಬೀದಿ ಬದಿಯ ತರಕಾರಿ ಅಂಗಡಿಗೆ ನುಗ್ಗಿದ ಕಾರು ಅದೃಷ್ಟವಶಾತ್ ಅಂಗಡಿಯಲ್ಲಿದ್ದ ವ್ಯಾಪಾರಸ್ತೆ ಮತ್ತೊಂದು ಬದಿಯಲ್ಲಿದ್ದರಿಂದ ಕೂದಲೆಳೆಯಲ್ಲಿ ಅಪಾಯದಿಂದ ಪಾರಾರಾಗಿದ್ದಾರೆ.

ರಸ್ತೆಯ ಒಂದು ಬದಿಯಿಂದ ಕಾರನ್ನು ಚಾಲಕ ಹಿಂತೆಗೆಯುವಾಗ ಬೆಂಗಳೂರು ಕಡೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಬಂದಿದ್ದು ಗಾಬರಿಯಾದ ಕಾರು ಚಾಲಕ ರಸ್ತೆ ಬದಿಯ ಅಂಗಡಿ ಒಳಗೆ ನುಗ್ಗಿದ್ದಾನೆ.

ಬ್ರೇಕ್ ಹೊಡೆದ ರಭಸಕ್ಕೆ ಬಸ್ ಚಾಲಕ ತರಕಾರಿ ಅಂಗಡಿ ಬದಿಯಲ್ಲಿ ನಿಲುಗಡೆ ಮಾಡಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಸಹ ಅಪಾಯ ಸಂಭವಿಸಿಲ್ಲ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!