Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ :ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಬಂಧನ ಖಂಡನೀಯ ; ಹಿಂದೂ ಮುಖಂಡ ಪ್ರವೀಣ್ ಪೂಜಾರಿ...

ಮೂಡಿಗೆರೆ :ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಬಂಧನ ಖಂಡನೀಯ ; ಹಿಂದೂ ಮುಖಂಡ ಪ್ರವೀಣ್ ಪೂಜಾರಿ ಹೇಳಿಕೆ

ಮೂಡಿಗೆರೆ : ಇತ್ತೀಚಿನ ದಿನಗಳಲ್ಲಿ ಬಿಲ್ಲವ ಸಮಾಜದ ಯುವಕರ ಮೇಲೆ ನಡೆಯುತ್ತಿರುವ ಕಾನೂನು ದುರುಪಯೋಗದ ಘಟನೆಗಳನ್ನು ಹಿಂದೂ ಮುಖಂಡ ಪ್ರವೀಣ್ ಪೂಜಾರಿ  ಅತ್ಯಂತ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು  ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ಕಾನೂನಿನ ರಕ್ಷಣೆಯ ಹೆಸರಿನಲ್ಲಿ, ಪೊಲೀಸರ ಮೇಲೆ ರಾಜಕೀಯ ಒತ್ತಡ ಹೇರುತ್ತಾ, ತಪ್ಪಿಲ್ಲದ ಯುವಕರಿಗೆ ಸುಳ್ಳು ಪ್ರಕರಣಗಳನ್ನು ಹೊರೆಸುವುದು ಕೇವಲ ಅನ್ಯಾಯವಲ್ಲ — ಇದು ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕುಗ್ಗಿಸುವ ಗಂಭೀರ ಅಪರಾಧ.

ರಾಜಕೀಯವಾಗಿ ಬೆಳೆಯುತ್ತಿರುವ ಬಿಲ್ಲವ ಯುವಕರನ್ನು ಟಾರ್ಗೆಟ್ ಮಾಡಿ ಸುಳ್ಳು ದೂರುಗಳು ದಾಖಲಿಸುವುದು, ಜಾತಿಯ ಹೆಸರಿನಲ್ಲಿ ಅವರನ್ನು ಜೈಲಿಗೆ ಕಳಿಸುವ ಪ್ರಯತ್ನ ಮಾಡುವುದು  ಇದು ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ಆತ್ಮಕ್ಕೆ ನೇರ ಅವಮಾನ.

ನಾರಾಯಣ ಗುರುಗಳ “ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು” ಎಂಬ ದಾರಿಯಲ್ಲಿ ನಡೆದು ಎಲ್ಲರನ್ನು ಒಗ್ಗೂಡಿಸುವ ನಮ್ಮ ಸಮಾಜವನ್ನು ದುರ್ಬಲಗೊಳಿಸಲು ಕೆಲವು ಮಂದಿ ಮಾಡುತ್ತಿರುವ ಈ ಕುತಂತ್ರವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಸಂತೋಷ್ ಕೋಟ್ಯಾನ್ ಹಾಗೂ ಇತರ ಬಿಲ್ಲವ ಯುವಕರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ತಕ್ಷಣ ಹಿಂಪಡೆಯಬೇಕು. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ  ಸಂದರ್ಭದಲ್ಲಿ ಚಂದ್ರು ಸಾಲಿಯಾನ್,ತಾರನಾಥ್ ಪೂಜಾರಿ. ರವಿ ಪೂಜಾರಿ. ವೆಂಕಟೇಶ್ ಪೂಜಾರಿ. ನಾಗರಾಜ್ ಪೂಜಾರಿ. ಪದ್ಮನಾ ಪೂಜಾರಿ. ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!