Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ: ಅಡಿಪಾಯದಿಂದಲೇ 12 ಅಡಿ ಗೇಟ್ ಕಿತ್ತ ದುಷ್ಕರ್ಮಿಗಳು; ಕಳ್ಳ ಸಾಗಾಣಿಕೆದಾರರ ಕೃತ್ಯದ ಶಂಕೆ

ಮೂಡಿಗೆರೆ: ಅಡಿಪಾಯದಿಂದಲೇ 12 ಅಡಿ ಗೇಟ್ ಕಿತ್ತ ದುಷ್ಕರ್ಮಿಗಳು; ಕಳ್ಳ ಸಾಗಾಣಿಕೆದಾರರ ಕೃತ್ಯದ ಶಂಕೆ

ಮೂಡಿಗೆರೆ: ಚಾರ್ಮಾಡಿ ಘಾಟ್‌ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ದೇವನಗುಲ್‌ ಗ್ರಾಮದ ಅಡ್ಡದಾರಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರ ಮಾರ್ಗದರ್ಶಕ ಕಾರ್ಯಾಚರಣೆಯಡಿ 12 ಅಡಿ ಉದ್ದದ ಬಲಿಷ್ಠ ಗೇಟ್‌ ಅಳವಡಿಸಲಾಗಿತ್ತು. ರಾತ್ರಿ ವೇಳೆ ಸಂಚಾರ ಸಂಪೂರ್ಣ ನಿಲ್ಲಿಸುವ ಮೂಲಕ ಭದ್ರತೆ ಬಲಪಡಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಣಕಲ್ ಠಾಣಾ ಪಿಎಸ್‌ಐ ರೇಣುಕಾ ನೇತೃತ್ವದ ಪೊಲೀಸರು ರಸ್ತೆ ಎರಡೂ ಬದಿಗಳಲ್ಲಿ ಗುಂಡಿ ತೋಡಿ, ಗೇಟ್‌ನ ಕೀಲಿಯನ್ನು ಚೆಕ್‌ಪೋಸ್ಟ್ ಸಿಬ್ಬಂದಿ ವಶದಲ್ಲಿ ಇಟ್ಟು ನಿರ್ವಹಣೆ ಮಾಡುತ್ತಿದ್ದರು.

ಆದರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಗೇಟ್‌ನ್ನು ಅಡಿಪಾಯದಿಂದಲೇ ಕಿತ್ತ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ ಕಳ್ಳಸಾಗಾಣಿಕೆಗೆ ದಾರಿ ಮಾಡಿಕೊಡಲು ನಡೆದಿರಬಹುದೆಂಬ ಅನುಮಾನ ಕಾಣುತ್ತಿದೆ. ಪೊಲೀಸರು–ಗ್ರಾಮಸ್ಥರು ಸೇರಿ ಹಾಕಿದ್ದ ಭದ್ರತಾ ವ್ಯವಸ್ಥೆಗೆ ಈ ಕೃತ್ಯ ಗಂಭೀರ ಸವಾಲಾಗಿದ್ದು, ಸ್ಥಳದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. “ಸುರಕ್ಷತೆಗೆ ಕೈಗೊಂಡ ಕ್ರಮಗಳನ್ನು ಹಾಳುಮಾಡುವ ಪ್ರಯತ್ನ ಯಾರಿಂದಾದರೂ ನಡೆದರೆ ಕಠಿಣ ಕ್ರಮ ಅನಿವಾರ್ಯ,” ಎಂದು ಬಣಕಲ್ ಪಿ ಎಸ್.ಐ.ರೇಣುಕಾ ತಿಳಿಸಿದ್ದಾರೆ.

ಅಕ್ರಮ ಚಟುವಟಿಕೆಗಳನ್ನು ಶಾಶ್ವತವಾಗಿ ತಡೆಯಲು ಪೊಲೀಸರು ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!