Sunday, August 16, 2026
Homeಜಿಲ್ಲಾಸುದ್ದಿಶೃಂಗೇರಿ: ಬಿಜಿಎಸ್ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಥ್ರೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ!

ಶೃಂಗೇರಿ: ಬಿಜಿಎಸ್ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಥ್ರೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ!

Telegram Group
Join Now

ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಬಿಜಿಎಸ್ ಸೈನ್ಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿಘ್ನೇಶ್ ಬಿ. ಸಿ. ಗೌಡ ಥ್ರೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹೌದು .. ಬಿಜಿಎಸ್ ಸೈನ್ಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ಸೈನ್ಸ್ ವಿಭಾಗದಲ್ಲಿ ಓದುತ್ತಿರುವ ಮಂಜುನಾಥ್ ಟೇಕ್ವಾಂಡೋದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಂಗಮೇಶ್ ಎಸ್ ಬಾಗೂರ್ ಹಾಗೂ ಪ್ರಭುದ್ ನಾಯ್ಕ್ ರಾಜ್ಯ ಮಟ್ಟದ ಶೆಟಲ್ ಬ್ಯಾಟ್ಮಿಟನ್ ಗೆ ಆಯ್ಕೆಯಾಗಿದ್ದಾರೆ.

ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಧನುಶ್ ಎಸ್. ಪಿ, ತನುಶ್ ಬಿ. ಕೆ, ಸಮನ್ವಿ ಬಿ. ಎ ಇವರು ಚೆಸ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ಬಿಜಿಎಸ್ ಕಾಲೇಜಿನ ಪಿಯು ಕಾಮರ್ಸ್ ಬಾಲಕಿಯರ ವಿಭಾಗದಲ್ಲಿ ರಕ್ಷಿತ, ಪ್ರಕೃತಿ ಹಾಗೂ ಬಾಲಕರ ವಿಭಾಗದಲ್ಲಿ ಸಚಿನ್ ಇವರುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments