ಚಿಕ್ಕಮಗಳೂರು : ಎರಡೂವರೆ ವರ್ಷ ಪೂರೈಸಿರುವ ಕಾಂಗ್ರೆಸ್ಸಿನ ದುರಾಡಳಿತದ ಸರ್ಕಾರ ದಿನನಿತ್ಯ ರೈತರ ಪಾಲಿಗೆ ಯಮ ಕಿಂಕರರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳನ್ನು ಕೇಳುವುದು, ರೈತರ ಸಮಸ್ಯೆಗೆ ಪರಿಹಾರ ನೀಡುವುದನ್ನು ಬಿಟ್ಟು ಕಳೆದ 6 ತಿಂಗಳಿನಿಂದ ತಮ್ಮ ಕುರ್ಚಿ ಕಾದಾಟದಲ್ಲಿ ನಿರತರಾಗಿದ್ದಾರೆ. ಇಡೀ ದೇಶದಲ್ಲಿ 7 ಲಕ್ಷ ಹಳ್ಳಿಗಳಿವೆ ದೇಶದ ಜನಸಂಖ್ಯಾ ಹೆಚ್ಚಿರುವುದು ಹಳ್ಳಿಗಳಲ್ಲಿ, 18ರಿಂದ 19% ಜಿಡಿಪಿ ಕೊಡುವುದು ನಮ್ಮ ರೈತರು, ರೈತರು ನಮ್ಮ ದೇಶದ ಬೆನ್ನೆಲುಬು ಸರ್ಕಾರ ರೈತರ ಪರವಾಗಿ ಇರೋದನ್ನ ಬಿಟ್ಟು ರೈತ ವಿರೋಧಿ ಕೆಲಸಗಳನ್ನ ಮಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಇದೆ ನವೆಂಬರ್ 27 ಮತ್ತು 28 ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಡಿಸೇಂಬರ್ 1 ಮತ್ತು 2 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ “ಜನಪರ ನೋಟ ರೈತಪರಹೊರಟ” ಘೋಷಣೆ ಅಡಿ ಕರ್ನಾಟಕ ಬಿಜೆಪಿ ಮತ್ತು ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಹೇಳಿದರು.
ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮೆಕ್ಕೇಜೋಳಕ್ಕೆ 2,400 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದ್ದರು ಕೂಡ, ಕೇಂದ್ರ ಸರ್ಕಾರ ಮೆಕ್ಕೆ ಜೋಳವನ್ನು ಖರೀದಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೊಟ್ಟರು ಕೂಡ ಇಲ್ಲಿಯವರೆಗೂ ರಾಜ್ಯಸರ್ಕಾರ ರಾಜ್ಯದಲ್ಲಿ ಒಂದೇ ಒಂದು ಖರೀದಿ ಕೇಂದ್ರ ಓಪನ್ ಮಾಡಿಲ್ಲ.
ಉತ್ತರ ಕರ್ನಾಟಕ 11 ಜಿಲ್ಲೆಗಳಲ್ಲಿ ಅತಿಯಾದ ಮುಂಗಾರು ಮಳೆಯಿಂದ 38 ಲಕ್ಷಕ್ಕೂ ಹೆಚ್ಚು ಹೆಕ್ಟರ್ ಬೆಳೆ ನಾಶವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಅಡಿಕೆ, ತೆಂಗು ಅಂತಹ ತೋಟಗಾರಿಕಾ ಬೆಳೆಗಳು ಅತಿಯಾದ ಮಳೆಯಿಂದ ರೋಗಕ್ಕೆ ತುತ್ತಾಗಿದೆ. ಆದರೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಣೆ ಮಾಡಿದ್ದೂ ಬಿಟ್ಟರೆ ಇಲ್ಲಿಯವೆರೆಗೆ ಒಂದು ರೂಪಾಯಿ ಹಣವನ್ನು ಬಿಡುಗಡೆ ಮಾಡಿಲ್ಲ.
2009 ಮತ್ತು 2010 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅತಿವೃಷ್ಟಿ ಪ್ರವಾಹದ ಸಂದರ್ಭದಲ್ಲಿ ರಾಜ್ಯದ ಬಜೆಟ್ 85,000 ಕೋಟಿ ಇದ್ದರು ಕೂಡ ಆ ವೇಳೆ 6,000 ರೂಪಾಯಿ ಹೆಚ್ಚಿನ ಪರಿಹಾರ ನೀಡಿದ್ದೇವೆ.
2019 ಮತ್ತು 2020 ರಲ್ಲಿ ರಾಜ್ಯದ ಬಜೆಟ್ 2 ಲಕ್ಷದ 34 ಸಾವಿರ ಕೋಟಿ ಇದ್ದಾಗ 10,000 ರೂಪಾಯಿ ಹೆಚ್ಚಿನ ಪರಿಹಾರ ಪ್ರತಿ ಹೆಕ್ಟೇರ್ ಗೆ ನೀಡಿದ್ದೇವೆ.
ಪ್ರವಾಹದಿಂದ ಮನೆ ಬಿದ್ದ ಸಂದರ್ಭದಲ್ಲಿ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ಯನ್ನು ಪರಿಹಾರ ನೀಡಿದ್ದೀವಿ. ಅರ್ಧ ಮನೆ ಬಿದ್ದ ಸಂದರ್ಭದಲ್ಲಿ 1 ಲಕ್ಷ ರೂಪಾಯಿ ಅನ್ನು ತಕ್ಷಣ ದುರಸ್ತಿ ಕಾರ್ಯಕ್ಕೆ ಕೊಟ್ಟಿದ್ದೀವಿ. 24 ಗಂಟೆಯಲ್ಲಿ ಕೂಡಲೇ 10,000 ರೂಪಾಯಿ ನಿರಾಶ್ರೀತರ ಖಾತೆಗೆ ಹಾಕಿದ್ದೇವೆ, ಬೆಳೆ ಪರಿಹಾರವನ್ನು 30 ದಿನದಲ್ಲಿ ಅವರ ಖಾತೆಗೆ ಹಾಕುವ ಕೆಲಸ ಮಾಡಿದ್ದೇವೆ.
ಆದರೆ ಸಿದ್ದರಮ್ಮಯ್ಯನವರ ನೇತೃತವದ ಕಾಂಗ್ರೆಸ್ ಸರ್ಕಾರ ರಾಜ್ಯದ ಬಜೆಟ್ 4 ಲಕ್ಷದ 17 ಸಾವಿರ ಕೋಟಿ ಇದ್ದರು ಕೂಡ ಕೇವಲ 8,000 ಮಾತ್ರ ಪ್ರತಿ ಹೆಕ್ಟರ್ ಗೆ ಹೆಚ್ಚುವರಿಯಾಗಿ ಕೊಡ್ತೀವಿ ಅನ್ನುವುದನ್ನು ಮಾನ್ಯ ಸಿದ್ಧರಾಮಯ್ಯನವರು ಹೇಳಿದ್ದಾರೆ, ಕನಿಷ್ಠ 20,000 ಪ್ರತಿ ಹೆಕ್ಟರ್ ಗೆ ಆದರೂ ರೈತರಿಗೆ ಬೆಳೆ ಹಾನಿ ಪರಿಹಾರ ಹೆಚ್ಚುವರಿಯಾಗಿ ಮಾಡಿಕೊಡಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಇಷ್ಟು ಬೆಳೆ ನಾಶ ಆಗಿದೆ, ಮನೆ ಬಿದ್ದಿದ್ದರೂ ಕೂಡ ಇಲ್ಲಿಯವರೆಗೂ ಇಲ್ಲಿಯವೆರಗೂ ಒಂದೇ ಒಂದು ರೂಪಾಯಿ ಪರಿಹಾರ ಬಿಡುಗಡೆ ಆಗಿಲ್ಲ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿರುವ ಕರ್ನಾಟಕ ರಾಜ್ಯದ 24ಲಕ್ಷ ಹಾಲು ಉತ್ಪಾದಕ ರೈತ ಕುಟುಂಬಗಳು ಪಶು ಆಹಾರ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೊಳಗಾಗಿವೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವಂತಹ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನವನ್ನು 5 ರೂಪಾಯಿ ಇಂದ 7 ರೂಪಾಯಿ ಗೆ ಹೆಚ್ಚಳ ಮಾಡುವ ಭರವಸೆ ನೀಡಿದ್ದರು ಹಾಲಿನ ಬೆಲೆ ಹೆಚ್ಚಳ ಮಾಡಿದರು ಹೊರತು ಪ್ರೋತ್ಸಹಧನ ಹೆಚ್ಚಳ ಮಾಡಿಲ್ಲ.
ಬಾಕಿ ಉಳಿಸಿಕೊಂಡಿರುವ 620 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆಗೊಳಿಸುವುದು.
ನಮ್ಮ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ 4,000 ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡುತ್ತಿದ್ವಿ ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ನಿಲ್ಲಿಸಿದೆ.
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 2,416 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 129 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ರೈತರ ಬಗ್ಗೆ ತೋರಿಸುತ್ತಿರುವ ನಿರ್ಲಕ್ಷ್ಯ ದುರಾದೃಷ್ಟಕರ ಸಂಗತಿ.
ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷದ 85,000 ಪ್ರಕರಣಗಳು ಬಾಕಿ ಇದೆ. ರಾಜ್ಯದಲ್ಲಿ 84 ಜನ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. 35,000 ಪ್ರಕರಣಗಳಿಗೆ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ , ರಾಜ್ಯದಲ್ಲಿ 6,000ಕ್ಕೂ ಹೆಚ್ಚು ಆನೆಗಳಿವೆ ಆನೆಗಳ ದಾಳಿ ರಾಜ್ಯದಲ್ಲಿ ಹೆಚ್ಚಾಗುತ್ತಿವೆ ಆದರೆ ಸರಕಾರ ಆನೆ ದಾಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ, ನಮ್ಮದು ರೈತಪರವಾದ ಸರ್ಕಾರ ಎನ್ನುವ ಕಾಂಗ್ರೆಸ್ ದಿನನಿತ್ಯ ರೈತರಿಗೆ ಒಂದಲ್ಲ ಒಂದು ಸಂಕಷ್ಟ ತಂದೊಡ್ಡುತ್ತಿದ್ದಾರೆ.
ಬಿಜೆಪಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳು :
ತುಂಗಭದ್ರಾ ವ್ಯಾಪ್ತಿಯಲ್ಲಿ 2ನೇ ಬೆಳೆಗೆ ನೀರಿಲ್ಲ ಪ್ರತಿ ಎಕರೆಗೆ ₹25,000 ಪರಿಹಾರ ಕೊಡಿ
2025-26ರ ಮುಂಗಾರು ಅತಿವೃಷ್ಟಿಯಿಂದಾದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾನದಂಡಕ್ಕೆ ಅನುಗುಣವಾಗಿ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ಎಕರೆಗೆ ಹೆಚ್ಚುವರಿ ₹20,000 ಪರಿಹಾರ ನೀಡಿ
ಬಾಕಿ ಉಳಿಸಿಕೊಂಡಿರುವ ಹಾಲು ಉತ್ಪಾದಕರ ಪ್ರೋತ್ಸಾಹ ಧನ ₹620 ಕೋಟಿ ಬಿಡುಗಡೆ ಮಾಡಿ
ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಕಿರುಕುಳದಿಂದ ಮುಕ್ತಿಕೊಡಿ
ಪ್ರತಿ ಟನ್ ಕಬ್ಬಿಗೆ ಕೊಡುತ್ತಿರುವ ₹3,300 SAP ಯನ್ನು ಎಲ್ಲಾ ಜಿಲ್ಲೆಗಳ ರೈತರಿಗೂ ಕಡ್ಡಾಯವಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನೀರಾವರಿ ಯೋಜನೆಗಳಿಗೆ ₹30 ಸಾವಿರ ಕೋಟಿ ಬಿಡುಗಡೆ ಮಾಡಿ
ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ₹4,000 ಕಿಸಾನ್ ಸಮ್ಮಾನ್ ಯೋಜನೆ ಮರುಪ್ರಾರಂಭಿಸಿ
ರೈತರು ಬೆಳೆದ ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಈರುಳ್ಳಿ ಸೇರಿದಂತೆ ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಪ್ರತಿ ಗ್ರಾಮ ಪಂಚಾಯತ್/ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು.
ಕಲ್ಯಾಣ ಕರ್ನಾಟಕದ ಜೀವನಾಡಿಯಾದ ತುಂಗಭದ್ರ ಅಣೆಕಟ್ಟಿನ ಕ್ರಸ್ಟ್ ಗೇಟ್‌ಗಳ ರಿಪೇರಿ ಕಾರಣದಿಂದ 2ನೇ ಬೆಳೆಗೆ ನೀರು ನಿಲ್ಲಿಸಿರುವುದರಿಂದ ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು.
ಕೃಷ್ಣಾ ಮೇಲ್ದಂಡೆ, ಮಹಾದಾಯಿ, ಕಳಸಾ ಬಂಡೂರಿ, ಅಪ್ಪರ್‌ಭದ್ರಾ, ಮೇಕೆದಾಟು, ಮತ್ತು ಎತ್ತಿನಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿವರ್ಷ 30 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.
ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ದಾಳಿಂಬೆ, ದ್ರಾಕ್ಷಿ, ಬಾಳೆ ಇತ್ಯಾದಿಗಳಿಗೆ ರೋಗಗಳಿಂದಾದ ಹಾನಿಗೆ ಪ್ರತಿ ಗಿಡ/ಮರಕ್ಕೆ ಕನಿಷ್ಠ 500 ರೂ. ನಂತೆ ಪರಿಹಾರ ನೀಡಬೇಕು.
ಬಿಜೆಪಿ ಸರ್ಕಾರದ ಅವಧಿಯ 25,000 ರೂ. ಶುಲ್ಕದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮತ್ತು ವಿದ್ಯುತ್ ಸಂಪರ್ಕ ಯೋಜನೆಯನ್ನು ಪುನಃ ಪ್ರಾರಂಭಿಸಬೇಕು.
ರೈತರಿಗೆ ಸಹಕಾರಿ ಬ್ಯಾಂಕ್‌ಗಳಿಂದ ಶೂನ್ಯ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸಬೇಕು.
ಈ ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನಕಾರ್ಯದರ್ಶಿಗಳಾದ ಕಲ್ಮುರುಡಪ್ಪ , ಚಿಕ್ಕಮಗಳೂರು ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಆನಂದಪ್ಪ, ಬಿಜೆಪಿ ಮಾಧ್ಯಮ ಪ್ರಮುಖರಾದ ದಿನೇಶ್, ಪ್ರಮುಖರಾದ ಮಂಜುನಾಥ್, ಶಂಭಯ್ಯನೂರು ಆನಂದಪ್ಪ, ಚರ್ವೀನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
