Sunday, August 16, 2026
Homeಜಿಲ್ಲಾಸುದ್ದಿಮೂಡಿಗೆರೆ: ದಾರದಹಳ್ಳಿ ಪ್ರೌಢ ಶಾಲಾ ವಿದ್ಯಾರ್ಥಿನಿ ತ್ರಿವಿಧ ಜಿಗಿತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ: ಪಂಚಾಯಿತಿ ವತಿಯಿಂದ...

ಮೂಡಿಗೆರೆ: ದಾರದಹಳ್ಳಿ ಪ್ರೌಢ ಶಾಲಾ ವಿದ್ಯಾರ್ಥಿನಿ ತ್ರಿವಿಧ ಜಿಗಿತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ: ಪಂಚಾಯಿತಿ ವತಿಯಿಂದ ಸನ್ಮಾನ

Telegram Group
Join Now

ಮೂಡಿಗೆರೆ: ತಾಲೂಕಿನ ಕೆಸವಳಲು ಗ್ರಾಮದ ಉದಯ ಕೆ.ಬಿ. ಹಾಗೂ ಜಯಂತಿ ದಂಪತಿಯ ಪುತ್ರಿ ಬಾಲಕಿಯರ 17 ವಯೋಮಿತಿ ವಿಭಾಗದ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಹೌದು .. ನಿತ್ಯಶ್ರೀ ಸರ್ಕಾರಿ ಪ್ರೌಢ ಶಾಲೆ ದಾರದಹಳ್ಳಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕೀರ್ತಿ ತಂದಿದ್ದಕ್ಕೆ ಸರ್ಕಾರಿ ಪ್ರೌಢ ಶಾಲೆ ದಾರದಹಳ್ಳಿ SDMC ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ಈ ಸಂದರ್ಭದಲ್ಲಿ ದಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿಕ್ರಂ ಮಾತನಾಡಿ, ತಾಲ್ಲೂಕಿನ ಕೆಸವಳಲು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ನಿತ್ಯಶ್ರೀ ಸಾಧನೆ ಮಾಡಿರುವುದು ನಮ್ಮ ಪಂಚಾಯಿತಿ ಗ್ರಾಮ ಹಾಗೂ ತಾಲೂಕಿಗೂ ಹೆಮ್ಮೆ ತಂದಿದ್ದು,ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗೆ ಇಂಬು ನೀಡುವ ನಿಟ್ಟಿನಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗುವ ನಿಟ್ಟಿನಲ್ಲಿ ಸಾಧಕಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ದಾರದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾದಿಯ, ಉಪಾಧ್ಯಕ್ಷೆ ನವೀನಾ ಅಶ್ವತ್, ಸದಸ್ಯರಾದ ಸಂಪತ್ ಬಿಳ್ಳೂರ್, ಸಿದ್ದೇಶ್, ಮಂಜುನಾಥ ಕಡಿದಾಳು, ಸಾಧನ ಮಣಿಶ್, ಮಯೂರ್ ಹಾಲೂರು , ಸರ್ಕಾರಿ ಪ್ರೌಢ ಶಾಲೆ ದಾರದಹಳ್ಳಿ ಮುಖ್ಯೋಪಾಧ್ಯಾಯ ಅನಂತ್, ಶಿಕ್ಷಕ ವೃಂದ, . ಪೋಷಕರು, ಗ್ರಾಮಸ್ಥರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments